ಮುಂಬೈ: ಬಾಲ್ ಬ್ಯಾಟ್ಸ್ ಮನ್‍ನ ಪ್ಯಾಡ್ ಗೆ ತಾಗಿಲ್ಲ, ವಿಕೆಟ್ ಬೀಳಿಸಲಿಲ್ಲ. ಅಷ್ಟೇ ಅಲ್ಲದೇ ಫೀಲ್ಡರ್ ಗಳು ಯಾರು ಔಟ್ ಗೆ ಮನವಿ ಸಲ್ಲಿಸಲೇ ಇಲ್ಲ. ಆದರೆ ಬ್ಯಾಟ್ಸ್ ಮನ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ಎಡಗೈ ಆಟಗಾರ ಯವರಾಜ್ ಸಿಂಗ್ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ಬಳಿಕ ವೈರಲ್ ಆಗಿದ್ದ ವಿಡಿಯೋ ಈಗ ಮತ್ತಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.
Advertisement
ಈ ವಿಡಿಯೋದಲ್ಲಿ, ನೀವು ಇದೂವರೆಗೆ ನೋಡಿರದ ಅಪರೂಪದ ಔಟ್ ಪ್ರಕರಣ ಇದಾಗಿದ್ದು, ಬಾಲ್ ಬ್ಯಾಟ್ಸ್ ಮನ್ ಬ್ಯಾಟ್ ಗೆ ತಾಗಿಲ್ಲ, ಅಷ್ಟೇ ಅಲ್ಲದೇ ಆಟಗಾರರು ಔಟ್ ಗೆಂದು ಮನವಿ ಸಲ್ಲಿಸಲೇ ಇಲ್ಲ. ಆದರೂ ಅಂಪೈರ್ ಬೆರಳನ್ನು ಎತ್ತಿ ಔಟ್ ಎಂದು ತೀರ್ಪು ನೀಡಿದ್ದಾರೆ ಎಂಬುದಾಗಿ ಅಕ್ಷರಗಳಲ್ಲಿ ಪ್ರಕಟವಾಗಿದೆ.
Advertisement
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಟ್ವೀಟ್ ಮಾಡಿ, ಧನ ಸಹಾಯಕ್ಕಾಗಿ 2007ರಲ್ಲಿ ಆಯೋಜನೆಗೊಂಡಿದ್ದ ಕ್ರಿಕೆಟ್ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಒಬ್ಬ ಒಂದೇ ಓವರ್ ನಲ್ಲಿ ಸತತವಾಗಿ ಎರಡು ಬಾಲ್ ಗಳನ್ನು ಹೊಡೆಯದೇ ಇದ್ದಲ್ಲಿ ಔಟ್ ಎಂದು ಘೋಷಿಸುವ ನಿಯಮವನ್ನು ಮೊದಲೇ ಅಳವಡಿಸಲಾಗಿತ್ತು. ಹೀಗಾಗಿ ಆತ ಬಾಲನ್ನು ಹೊಡೆಯದೇ ಇದ್ದ ಕಾರಣ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಈ ವರ್ಷ ಜೂನ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿರುವ ಯುವರಾಜ್ ಸಿಂಗ್ ಫಿಟ್ ನೆಸ್ ಸಮಸ್ಯೆ ಮತ್ತು ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
Advertisement
304 ಎಕದಿನ ಪಂದ್ಯಗಳ 278 ಇನ್ನಿಂಗ್ಸ್ ಮೂಲಕ ಒಟ್ಟು 8701 ರನ್ ಹೊಡೆದಿರುವ ಯುವಿ 58 ಟಿ 20 ಪಂದ್ಯಗಳ 51 ಇನ್ನಿಂಗ್ಸ್ ಆಡಿ 1177 ರನ್ ಬಾರಿಸಿದ್ದಾರೆ. 40 ಟೆಸ್ಟ್ ಪಂದ್ಯಗಳ 62 ಇನ್ನಿಂಗ್ಸ್ ಆಡಿರುವ ಯುವರಾಜ್ ಸಿಂಗ್ ಒಟ್ಟು 1900 ರನ್ ಹೊಡೆದಿದ್ದಾರೆ.
https://youtu.be/wSwSaF2z124
https://youtu.be/MHFgWsfZBk4
For all those asking…
This match was played for charity in 2007. The rules for this match was that if a batsman leaves two balls, which are playable, without playing a shot in the same over, the umpire can declare you out. And that's what happened in this case! pic.twitter.com/iZA1C3sT72
— Mohandas Menon (@mohanstatsman) November 13, 2017