ಮುಂಬೈ: ಟಿ20 ಕ್ರಿಕೆಟ್ ಮಾದರಿಯಲ್ಲಿ ಮೂವರು ಆಟಗಾರರಿಗೆ ದ್ವಿಶತಕ ಸಿಡಿಸಲು ಸಾಧ್ಯವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಉಂಟಾಗಿದ್ದ ಕಾಡ್ಗಿಚ್ಚಿನಿಂದ ತೊಂದರೆ ಅನುಭವಿಸಿದ ಜನರಿಗೆ ನೆರವು ನೀಡುವ ಉದ್ದೇಶದಿಂದ ಚಾರಿಟಿಯೊಂದು ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಯುವಿ ತೆರಳಿದ್ದರು. ಈ ವೇಳೆ ತಮ್ಮ ಬೌಲಿಂಗ್ ನಿಂದ ಎಲ್ಲರ ಗಮನ ಸೆಳೆದರು. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ಯುವಿ ಅವರಿಗೆ ಟಿ20 ಮಾದರಿಯಲ್ಲಿ ದ್ವಿಶತಕ ದಾಖಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು ಯಾರು ಎಂದು ಪ್ರಶ್ನೆ ಎದುರಾಗಿತ್ತು. ಇದಕ್ಕೂತ್ತರಿಸಿದ ಯುವಿ, ಮೂವರು ಆಟಗಾರರ ಹೆಸರುಗಳನ್ನು ಮುಂದಿಟ್ಟರು.
Top catch from Alex Blackwell! Yuvraj Singh’s gotta go!
Donate to the #BigAppeal here: https://t.co/HgP8Vhnk9s pic.twitter.com/hW8rYmFIwU
— cricket.com.au (@cricketcomau) February 9, 2020
ಟಿ20 ಮಾದರಿಯಲ್ಲಿ ದ್ವಿಶತಕ ಸಾಧಿಸುವುದು ಕಷ್ಟಸಾಧ್ಯ. ಕ್ರಿಸ್‍ಗೇಲ್, ಎಬಿ ಡಿವಿಲಿಯರ್ಸ್ ಅವರಿಗೆ ದ್ವಿಶತಕ ಸಾಧಿಸುವ ಅವಕಾಶವಿತ್ತು. ಈ ಇಬ್ಬರೂ ದ್ವಿಶತಕ ಸಿಡಿಸುವ ಸಾಮರ್ಥ್ಯವಿದೆ. ಉಳಿದಂತೆ ರೋಹಿತ್ ಶರ್ಮಾ ಕೂಡ ಟಿ20 ಮಾದರಿಯಲ್ಲಿ ದ್ವಿಶತಕ ಗಳಿಸಬಹುದು ಎಂದು ಯುವಿ ಹೇಳಿದರು.
ಅಂದಹಾಗೇ 2013ರಲ್ಲೇ ಕ್ರಿಸ್‍ಗೇಲ್ ಟಿ20 ಮಾದರಿಯಲ್ಲಿ ದ್ವಿಶತಕ ಸಿಡಿಸುವ ಸನಿಹ ತಲುಪಿದ್ದರು. ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್‍ಗೇಲ್ 175 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಗೇಲ್ ದ್ವಿಶತಕ ಗಳಿಸುವ ಅವಕಾಶವಿದ್ದರೂ ಪಂದ್ಯದ ಇನ್ನಿಂಗ್ಸ್ ನ 20 ಓವರ್ ಗಳು ಅಂತ್ಯವಾಗಿತ್ತು.