ಮುಂಬೈ: ಬಿಸಿಸಿಐ ಆಟಗಾರ ಫಿಟ್ನೆಸ್ ಕುರಿತು ನಡೆಸುವ ಯೋ ಯೋ ಟೆಸ್ಟ್ ಪಾಸಾದ್ರೂ ನನ್ನನ್ನು ವಿಶ್ವಕಪ್ ಟೂರ್ನಿಯ ಆಯ್ಕೆಗೆ ಪರಿಗಣಿಸಿರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ, 2011 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದ ಯುವರಾಜ್ ಸಿಂಗ್ ಅವರನ್ನು 2017ರ ವೆಸ್ಟ್ ಇಂಡೀಸ್ ಟೂರ್ನಿಯ ಬಳಿಕ ತಂಡದಿಂದ ಕೈ ಬಿಡಲಾಗಿತ್ತು. ಈ ಕುರಿತು ಮಾತನಾಡಿರುವ ಯುವರಾಜ್ ಸಿಂಗ್ ಅಂದು ತಮಗಾದ ನೋವಿನ ಕುರಿತು ಹೇಳಿಕೊಂಡಿದ್ದಾರೆ.
Advertisement
Advertisement
2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಆಡಿದ್ದ 8-9 ಪಂದ್ಯಗಳಲ್ಲಿ 2 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕವೂ ನನ್ನನ್ನು ತಂಡದಿಂದ ಕೈಬಿಡುತ್ತಾರೆ ಎಂದು ಊಹಿಸಿರಲಿಲ್ಲ. ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಪರಿಣಾಮ ಮುಂದಿನ ಶ್ರೀಲಂಕಾ ವಿರುದ್ಧದ ಸರಣಿಗೆ ಸಿದ್ಧರಾಗಲು ಸೂಚನೆ ಲಭಿಸಿತ್ತು. ಇದರ ನಡುವೆಯೇ ಬಿಸಿಸಿಐ ಯೋ ಯೋ ಟೆಸ್ಟ್ ಕಡ್ಡಾಯ ಮಾಡಿತ್ತು. ಇದು ನನ್ನ ಆಯ್ಕೆಗೆ ಯೂಟರ್ನ್ ಆಗಿ ಪರಿಣಮಿಸಿತ್ತು. ಏಕೆಂದರೆ ಗಾಯದ ಸಮಸ್ಯೆಯಿಂದ ಗುಣವಾದ ಕೂಡಲೇ ಯೋ ಯೋ ಟೆಸ್ಟ್ ಎದುರಿಸಬೇಕಾಗಿ ಬಂತು ಹೇಳಿದ್ದಾರೆ.
Advertisement
36 ವರ್ಷದ ವಯಸ್ಸಿನಲ್ಲೂ ಅಂದು ನಾನು ಯೋ ಯೋ ಟೆಸ್ಟ್ ಪಾಸ್ ಮಾಡಿದ್ದೆ. ಆದರೆ ಅವರು ನಾನು ಯೋ ಯೋ ಟೆಸ್ಟ್ ಪೂರ್ಣಗೊಳಿಸುತ್ತೇನೆ ಎಂದು ಊಹೆ ಮಾಡಿರಲಿಲ್ಲ. ಪರಿಣಾಮ ನನಗೆ ದೇಶಿಯ ಕ್ರಿಕೆಟ್ ಟೂರ್ನಿ ಆಡಲು ಸೂಚನೆ ನೀಡಿದ್ದರು. ಅಲ್ಲಿಂದ ನನ್ನ ಕಡೆಗಣಿಸಲು ಸುಲಭವಾಯಿತು ಎಂದಿದ್ದಾರೆ.
Advertisement
ಟೀ ಇಂಡಿಯಾ ಪರ 304 ಏಕದಿನ, 58 ಟಿ20 ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್ ಕ್ರಮವಾಗಿ 8,701 ಹಾಗೂ 1,177 ರನ್ ಗಳಿಸಿದ್ದಾರೆ. 2017ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 127 ಎಸೆತಗಳಲ್ಲಿ 150 ರನ್ ಸಿಡಿಸಿದ್ದರು. ಆ ಬಳಿಕ ನಡೆದ ಚಾಂಪಿಯನ್ಸ್ ಟ್ರೋಪಿಯಲ್ಲಿ 4 ಇನ್ನಿಂಗ್ಸ್ ಗಳಿಂದ 35ರ ಸರಾಸರಿಯಲ್ಲಿ 105 ರನ್ ಗಳಿಸಿದ್ದರು. ಆದರೆ ಆ ಬಳಿಕ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ ತೋರಿದ ನಿರಾಸ ಪ್ರದರ್ಶನದಿಂದ ಅವರನ್ನು ತಂಡದಿಂದ ಕೈಬಿಡಲಾಗುತ್ತು.
ಸತತ 17 ವರ್ಷ ದೇಶದ ಪರ ಆಡಿದ್ದ ಆಟಗಾರನಿಗೆ ತಂಡದಿಂದ ಕೈಬಿಡುತ್ತಿರುವ ಕುರಿತು ಮಾಹಿತಿ ನೀಡಿರುವ, ಕುಳಿತು ಮಾತನಾಡುವ ಕೆಲಸ ಕೂಡ ಆಗಲಿಲ್ಲ. ಇದು ತಮಗೆ ಎದುರಾದ ಕೆಟ್ಟ ಅನುಭವ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದು ತಮಗೆ ಮಾತ್ರವಲ್ಲ ಹಲವು ಹಿರಿಯ ಕ್ರಿಕೆಟಿಗರಿಗೆ ಎದುರಾದ ಅನುಭವಾಗಿದೆ ಎಂದು ಯುವಿ ತಮ್ಮ ಅಸಮಾಧಾವನ್ನು ವ್ಯಕ್ತಪಡಿಸಿದ್ದಾರೆ.
ಏನಿದು ಯೋಯೋ ಫಿಟ್ನೆಸ್ ಟೆಸ್ಟ್?
ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮಥ್ರ್ಯ ವನ್ನು ಈ ಪರೀಕ್ಷೆಯಲ್ಲಿ ಆಟಗಾರ ತೋರಿಸಬೇಕಾಗುತ್ತದೆ. ಯೊಯೊ ಫಿಟ್‍ನೆಸ್ 20 ಮೀ ಅಳತೆಯಲ್ಲಿ ಎರಡು ಕೋನ್ ಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್ ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್ ನಲ್ಲಿಟ್ಟ ಕೋನ್ ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತಬೇಕು. ಒಟ್ಟಾರೆ ಮೂರು ಬೀಪ್ ಧ್ವನಿ ಒಳಗಾಗಿ ಸುತ್ತಬೇಕು. ಈ ಬೀಪ್ ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್ ಸೂಚನೆಯಾಗಿರುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಯ ಅಂತರ ಕಡಿಮೆಯಾಗುತ್ತ ಹೋಗುತ್ತದೆ. 2 ಬಾರಿ ಬೀಪ್ ಸಮಯದೊಳಗೆ 40 ಮೀ ಕ್ರಮಿಸಲಾಗದೇ ಹೋದರೆ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ. ಲ್ಯಾಪ್ಸ್ ಹಾಗೂ ಓಟದ ವೇಗ ಆಧರಿಸಿ ಅಂಕ ನೀಡಿ ಆಯ್ಕೆ ಮಾಲಾಗುತ್ತದೆ.