ಬೆಂಗಳೂರು: ಯುವರಾಜ್ ಸಿಂಗ್ ನೀಡಿದ ಮಾರ್ಗದರ್ಶನದಿಂದಾಗಿ ನಾನು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು ಎಂದು ಶುಬ್‍ಮನ್ ಗಿಲ್ ಹೇಳಿದ್ದಾರೆ.
ಐಸಿಸಿ ಅಂಡರ್ 19 ವಿಶ್ವಕಪ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನಾನು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಯುವಿ ಪಾಜಿ ತನಗೆ ಬ್ಯಾಟಿಂಗ್ ಮಾರ್ಗದರ್ಶನ ನೀಡಿದ್ದರು ಎಂದು ತಿಳಿಸಿದ್ದಾರೆ.
Advertisement
ಯುವಿ ಪಾಜಿ ಹಲವು ಬಾರಿ ನನ್ನ ಜೊತೆ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಮೈದಾನದ ಹೊರಗೆ ಹಾಗೂ ಒಳಗೆ ಹೇಗೆ ಇರಬೇಕೆಂಬ ಸಲಹೆಗಳನ್ನು ನೀಡಿದ್ದರು ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಪಾಕಿಸ್ತಾನದ ವಿರುದ್ಧದ ಪಂದ್ಯದ ಕುರಿತು ಮಾತನಾಡಿದ ಶುಬ್‍ಮನ್‍ಗಿಲ್, ಈ ವೇಳೆ ಹೆಚ್ಚು ಒತ್ತಡ ಇತ್ತು. ಆದರೆ ಕೋಚ್ ರಾಹುಲ್ ದ್ರಾವಿಡ್ ಅವರು ತನಗೆ ಪಂದ್ಯದ ಕೊನೆವರೆಗೂ ಬ್ಯಾಟಿಂಗ್ ನಡೆಸಲು ಸಲಹೆ ನೀಡಿದ್ದರು ಎಂದು ತಿಳಿಸಿದರು.
Advertisement
ಬಾಂಗ್ಲಾ ವಿರುದ್ಧದ ಪಂದ್ಯದ ನಂತರ ನಾನು ಕೋಲ್ಕತ್ತಾ ತಂಡದ ಪರ ಐಪಿಎಲ್ ಗೆ ಆಯ್ಕೆ ಆಗಿರುವ ಕುರಿತು ಮಾಹಿತಿ ಲಭಿಸಿತು. ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೂ ಐಪಿಎಲ್ ಕುರಿತು ಗಮನಹರಿಸದೇ ವಿಶ್ವಕಪ್ ಗೆಲ್ಲುವ ಬಗ್ಗೆ ಜಾಸ್ತಿ ಗಮನ ಹರಿಸಿದೆವು ಎಂದರು.
ನಮಗೆ ಅತ್ಯಂತ ಕೆಟ್ಟ ಪಿಚ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಹಾಗೇ ತರಬೇತಿ ನೀಡಲಾಗಿತ್ತು. ಆದರೆ ರಣಜಿ ಪಂದ್ಯಗಳಿಗೂ ವಿಶ್ವಕಪ್ ತರಬೇತಿಗೂ ಹೆಚ್ಚು ವ್ಯತ್ಯಾಸವಿದೆ. ವಿಶ್ವಕಪ್ ನಲ್ಲಿ ನಾವು ಮೊದಲ ಸ್ಥಾನದಲ್ಲಿ ಇದ್ದರೆ ಮಾತ್ರ ಕಪ್ ಗೆಲ್ಲಲು ಸಾಧ್ಯ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ಗೆಲುವಿನ ನಂತರ ನಮಗೆ ಕಪ್ ಗೆಲ್ಲುವ ಆತ್ಮ ವಿಶ್ವಾಸ ಹೆಚ್ಚಾಯಿತು ಎಂದು ತಿಳಿಸಿದರು. . ಇದನ್ನೂ ಓದಿ: ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!
ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸದ ಗಿಲ್ ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ಟೂರ್ನಿಯಲ್ಲಿ ಮೂರು ಅರ್ಧ ಶತಕ ಮತ್ತು ಒಂದು ಶತಕ ಸಿಡಿಸಿದ್ದಾರೆ. 6 ಪಂದ್ಯಗಳ 5 ಇನ್ನಿಂಗ್ಸ್ ಆಡಿರುವ ಶುಬ್‍ಮನ್ ಗಿಲ್ 114.24 ಸ್ಟ್ರೈಕ್ ರೇಟ್ ನೊಂದಿಗೆ ಒಟ್ಟು 372 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರರ ಪೈಕಿ 2ನೇ ಸ್ಥಾನಗಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನ ಗಮನಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಶುಬ್‍ಮನ್ ಗಿಲ್ ಅವರನ್ನು ಈ ಬಾರಿ ತಮ್ಮ ತಂಡಕ್ಕೆ ಸೆಳೆದುಕೊಂಡಿದೆ. ಗಿಲ್ ದೇಶಿಯ ರಣಜಿಯಲ್ಲಿ ಟೂರ್ನಿಗಳಲ್ಲಿ ಪಂಜಾಬ್ ಪರ ಆಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಶಾಟ್ ರೀಕ್ರಿಯೇಟ್ – ಅಂಡರ್ 19 ಆಟಗಾರ ಶುಬ್‍ಮನ್ ಗಿಲ್ ಸಿಕ್ಸರ್ ನೋಡಿ