ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾಗೆ ನಾಯಕಿ ಫಿಕ್ಸ್

Public TV
1 Min Read
YUVA

ಡಾ.ರಾಜ್‌ಕುಮಾರ್ (Rajkumar) ಕುಟುಂಬದ ಕುಡಿ ಯುವ ರಾಜ್‌ಕುಮಾರ್ (Yuva Rajkumar) ಚಿತ್ರರಂಗಕ್ಕೆ ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. ಸಂತೋಷ್ ಆನಂದ್ ರಾಮ್ – ಯುವ ಕಾಂಬಿನೇಷನ್‌ನ ಹೊಸ ಸಿನಿಮಾಗೆ ನಾಯಕಿ ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

yuvarajkumar 1

ಅಣ್ಣಾವ್ರ ನಂತರ ಶಿವಣ್ಣ, ರಾಘಣ್ಣ, ಪುನೀತ್, ವಿನಯ್, ಧೀರೇನ್, ಧನ್ಯಾ ಈಗಾಗಲೇ ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ದಾರಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮಗ ಯುವ‌ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ತೆರೆಮರೆಯಲ್ಲಿ ಸಕಲ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ದೀಪಿಕಾ ದಾಸ್ ಮನೆಯ ಬೆಕ್ಕು ನಾಪತ್ತೆ: ಹುಡುಕಿ ಕೊಟ್ಟವರಿಗೆ ಬಂಪರ್‌ ಆಫರ್

yuvarajkumar 2

ಪುನೀತ್ ರಾಜ್‌ಕುಮಾರ್ ಅವರ ಹುಟ್ಟಿದ ಹಬ್ಬ (ಮಾ.17)ದಂದು ಯುವ ಚೊಚ್ಚಲ ಸಿನಿಮಾ ಟೀಸರ್ ರಿಲೀಸ್ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಬೆನ್ನಲ್ಲೇ ಈ ಚಿತ್ರದ ನಾಯಕಿ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. `ಬೀರ್‌ಬಲ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್ (Rukmini Vasanth), ಯುವ ಚೊಚ್ಚಲ ಸಿನಿಮಾಗೂ ನಾಯಕಿಯಾಗುವ ಸಾಧ್ಯತೆಯಿದೆ.

ಬಾನದಾರಿಯಲ್ಲಿ, ಭಘೀರ, `ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಯುವ ಚಿತ್ರಕ್ಕೂ ನಟಿಸಲು ರುಕ್ಮಿಣಿಗೆ ಆಫರ್ ನೀಡಲಾಗಿದೆಯಂತೆ. ಈಗಾಗಲೇ ರುಕ್ಮಿಣಿ ಜೊತೆ ಒಂದು ಹಂತದ ಮಾತುಕತೆಯಾಗಿದೆ. ಆದರೆ ಇನ್ನೂ ಈ ಬಗ್ಗೆ ಅಂತಿಮವಾಗಿಲ್ಲ. ಈ ಕುರಿತು ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *