ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ‘ಯುವ’ (Yuva Film) ಸಿನಿಮಾವನ್ನು ಪ್ರಸಾರ ಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಕ್ಷಿತ್, ರಾಜ್ ಬಿ ಶೆಟ್ಟಿ
ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ (Yuva Rajkumar) ‘ಯುವ’ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ (Sapthami Gowda) ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಜನ ಮನ ಗೆದ್ದ ‘ಯುವ’ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಈ ವಾರಾಂತ್ಯದಲ್ಲಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗೋದಂತು ಖಚಿತ.
ಅಷ್ಟೇ ಅಲ್ಲದೆ, ವಾಹಿನಿಯು ನೋಡುಗರಿಗೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ‘ಯುವ’ ಸಿನಿಮಾ ನೋಡ್ತಿರುವಾಗ ವಾಹಿನಿಯ ಲೋಗೋ ಕೆಳಗಡೆ ಎಷ್ಟು ಬಾರಿ ಬೈಕ್ ಚಿತ್ರ ಬರುತ್ತದೆ ಎಂಬುದನ್ನು ನೋಡಿ, ಸರಿಯಾದ ಉತ್ತರ ಕೊಟ್ಟ ಅದೃಷ್ಟಶಾಲಿ ವಿಜೇತರಿಗೆ ‘ಯುವ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.
ಯುವರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಭಿನಯದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ ‘ಯುವ’ ಇದೇ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.