ಅಣ್ಣಾವ್ರ ಕುಟುಂಬದ ಕುಡಿ ಯುವರಾಜ್‌ಕುಮಾರ್(Yuva Rajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಅದ್ಯಾವಾಗ ಜ್ಯೂ.ಪವರ್ ಸ್ಟಾರ್ ಎಂಟ್ರಿಯಾಗುತ್ತೋ ಅಂತಾ ಕಾತುರದಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಚಿತ್ರದ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್(Santhosh Anandram) ಅತೀ ಶೀಘ್ರದಲ್ಲಿ ಬರುವುದಾಗಿ ಅಪ್‌ಡೇಟ್ ನೀಡಿದ್ದರು. ಈ ಬೆನ್ನಲ್ಲೇ ಮತ್ತಷ್ಟು ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.
Advertisement
ಯುವರಾಜ್ ಅಪ್ಪುನಂತೆ ಪವರ್‌ಸ್ಟಾರ್‌ನಂತೆ ಮಿಂಚುತ್ತಾರೆ ಎಂಬ ಗಟ್ಟಿ ನಂಬಿಕೆಯಲ್ಲಿ ಅಪ್ಪು ಫ್ಯಾನ್ಸ್ ಇದ್ದಾರೆ. ಆ ನಂಬಿಕೆಗೆ ಎಲ್ಲೂ ಲೋಪವಾಗಬಾರದು ಎಂದು ಯುವರಾಜ್‌ಕುಮಾರ್ ಕೂಡ ತೆರೆಮರೆಯಲ್ಲಿ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ.
Advertisement
Advertisement
ಯುವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ಸಂತೋಷ್ ಆನಂದ್‌ರಾಮ್ ಅವರ ಜೊತೆಯೇ ಬರಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಅದರಂತೆ ಹೊಂಬಾಳೆ ಸಂಸ್ಥೆಯಡಿ ಯುವ ಮತ್ತು ಸಂತೋಷ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಲೇಟ್ ಆದರೂ ಯುವ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್
Advertisement
ಪುನೀತ್ ಅವರ ಭರವಸೆಯ ಪ್ರತಿರೂಪ ಯುವರಾಜ್, ಈಗ ಅವರ ಸಿನಿಮಾಗಾಗಿ ಕೌಂಟ್‌ಡೌನ್ ಶುರುವಾಗಿದೆ. ಯುವನ ಚಿತ್ರ ಅನೌನ್ಸ್ ಆಗಿ ತಡವಾಗುತ್ತಿರುವ ಕಾರಣ ಏನು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ದೊಡ್ಮನೆಗೆ ಸರಿಹೊಂದುವ ಟೈಟಲ್ ಸಮೇತ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಜನವರಿಯಲ್ಲೇ ಚಿತ್ರೀಕರಣ ಆರಂಭವಾಗುತ್ತದೆ. ಮುಂದಿನ ವರ್ಷ 2023ರಲ್ಲಿ ಯುವನ ಚೊಚ್ಚಲ ಸಿನಿಮಾ ತೆರೆಗೆ ಅಬ್ಬರಿಸಲಿದೆ. ಪವರ್‌ಫುಲ್ ಕಥೆ, ಖಡಕ್ ಟೈಟಲ್ ಜೊತೆ ಯುವ ಬರಲಿದ್ದಾರೆ. ಕೆಲವೇ ದಿನಗಳಲ್ಲಿ ರಾಜವಂಶದ ಕುಡಿ ಯುವ ಸಿನಿಮಾ ಸುದ್ದಿಯ ಕುರಿತು ಮಾಹಿತಿ ನೀಡಲಿದೆ. ಯುವನ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ.