ಬೆಂಗಳೂರು: ಪಕೋಡ ಮಾಡಿ ಮಾರುವುದು ಒಂದು ಉದ್ಯೋಗವೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಹೇಳಿಕೆಯನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪಕೋಡ ಮಾರಾಟ ಮಾಡಿದರೂ ಉದ್ಯೋಗವೇ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಆದ್ದರಿಂದ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಚೇರಿ ಎದುರು Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಬಿಸಿ ಬಿಸಿ ಪಕೋಡ ಕರಿದು ಅವುಗಳಿಗೆ 10 ರೂ. ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
Advertisement
Advertisement
ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡ ಮಾರುವಂತೆ ಹೇಳಿದ್ದರು. ಆದರೆ ಪಕೋಡಾ ಮಾರುವ ಉದ್ಯೋಗ ಸೃಷ್ಠಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟದ ಉದಾಹರಣೆ ನೀಡಿದ್ದರು. ಇನ್ನೂ ಹೆಚ್ಚು ಜನ ಪಕೋಡಾ ಮಾರೋಕೆ ಆಗಲ್ಲ ಎಂದು ಯುವ ಸಮೂಹವೊಂದು ಪಕೋಡಾ ಅಂಗಡಿ ಪ್ರಾರಂಭಿಸಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಈ ವೇಳೆ ಮಾತನಾಡಿದ ಹೋರಾಟಗಾರರು, ಉದ್ಯೋಗಕ್ಕಾಗಿ ಯುವ ಜನರು, ನರೇಂದ್ರ ಮೋದಿ ಸ್ವಯಂ ಉದ್ಯೋಗ ಪಕೋಡಾ ಸ್ಟಾಲ್ ಮಾಡಿದ್ದು, ಈ ಸ್ಟಾಲ್‍ನ ಉದ್ದೇಶ ತಮಾಷೆಯಲ್ಲ. ಇದು ನಮ್ಮ ನೋವು ಮತ್ತು ಆಕ್ರೋಶದ ಪ್ರತೀಕವಾಗಿದೆ. ಪ್ರಧಾನಿಯವರ ಜೊತೆ 1ಗಂಟೆ ಸಂವಾದ ಮಾಡಿ ನಮ್ಮ ಯುವ ಪ್ರಣಾಳಿಕೆಯ ಕರಡನ್ನು ಕೊಡಲು ಫೆಬ್ರವರಿ 4ರಂದು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಪಕೋಡಾ ಸ್ಟಾಲ್ ಮುಂದುವರೆಯುತ್ತದೆ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
ಪಕೋಡಾ ಮಾರುವವರ ಬದುಕನ್ನು, ಕೃಷಿ ಮಾಡುತ್ತಿರುವವರ ಅಸಹಾಯಕತೆಯನ್ನು ಆಡಿಕೊಳ್ಳುವ ಪ್ರಧಾನಿಯನ್ನು ಕ್ಷಮಿಸುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=LqnbGiE0F3Q