ಬಿಜೆಪಿಯೊಂದಿಗೆ ವಿಲೀನಗೊಂಡ ಯುವ ತೆಲಂಗಾಣ ಪಕ್ಷ

Public TV
3 Min Read
telangana party

ಹೈದರಾಬಾದ್: ರಾಜ್ಯದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಪಕ್ಷದ ವಿರುದ್ಧ ಮತದಾರರ ನೆಲೆಯನ್ನು ಕ್ರೂಢೀಕರಿಸಲು ಯುವ ತೆಲಂಗಾಣ ಪಕ್ಷ (ವೈಟಿಪಿ) ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ವಿಲೀನಗೊಂಡಿದೆ.

ವೈಟಿಪಿಯ ಸಂಸ್ಥಾಪಕ ಜೆ ಬಾಲಕೃಷ್ಣ ಮತ್ತು ನಾಯಕಿ ರಾಣಿ ರುದ್ರಮಾದೇವಿ ಅವರು ಬುಧವಾರ ಕಾನ್‍ಸ್ಟಿಟ್ಯೂಷನ್ ಕ್ಲಬ್‍ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಸಂಜಯ್ ಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿಯೊಂದಿಗೆ ಔಪಚಾರಿಕವಾಗಿ ವಿಲೀನಗೊಂಡರು. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

web bjp logo 1538503012658

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಮಾತನಾಡಿ, ಇಂದು ನಾವು ಯುವ ತೆಲಂಗಾಣ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ. ತೆಲಂಗಾಣ ರಾಜ್ಯ ನಿರ್ಮಾಣದ ಆಂದೋಲನವನ್ನು ವೈಟಿಪಿ ವಿದ್ಯಾರ್ಥಿಗಳು ಪ್ರಾರಂಭಿಸಿದ್ದರು.

ರಾಜ್ಯದ ಪ್ರತ್ಯೇಕತೆಗೆ ಅಂದು ಅನೇಕ ವಿದ್ಯಾರ್ಥಿಗಳು ತಮ್ಮ ಜೀವಗಳನ್ನು ಬಲಿಕೊಟ್ಟಿದ್ದಾರೆ. ಇಂದು ಈ ಎಲ್ಲಾ ಯುವಕರು ನಮ್ಮೊಂದಿಗೆ ಸೇರುತ್ತಿರುವಾಗ ನಾವು ಸಂತೋಷಪಡುತ್ತೇವೆ. ಈಗ ಟಿಆರ್‍ಎಸ್ ವಿರುದ್ಧ ಬಿಜೆಪಿಯ ಹೋರಾಟವು ಬಲವಾಗಿರುತ್ತದೆ ಅಂತ ನಾನು ಭಾವಿಸುತ್ತೇನೆ. ಶೀಘ್ರದಲ್ಲೇ ನಾವು ತೆಲಂಗಾಣದಲ್ಲಿ ಬಿಜೆಪಿ ಸರ್ಕಾರವನ್ನು ನೋಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Telangana cm KCR

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರುದ್ರಮಾದೇವಿ ಅವರು, ದೇಶದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಭಾರತದ ಸ್ವಾತಂತ್ರ್ಯದ ನಂತರ, ವಿಶೇಷವಾಗಿ ಕಳೆದ 7 ವರ್ಷಗಳಲ್ಲಿ, ಯಾವುದೇ ಸರ್ಕಾರವು ಮಹಿಳೆಯರಿಗೆ ಇಷ್ಟೊಂದು ಪ್ರಾಮುಖ್ಯತೆಯನ್ನು ನೀಡಿಲ್ಲ. ಕೇಂದ್ರವು ಇಲ್ಲಿಯವರೆಗೆ ಎಂಟು ಮಹಿಳಾ ರಾಜ್ಯಪಾಲರನ್ನು ನೇಮಿಸಿದೆ. ಮೇಲಾಗಿ ನಾಲ್ಕು ಮಹಿಳೆಯರು ಮುಖ್ಯಮಂತ್ರಿಗಳಾದರು ಮತ್ತು 11 ಮಹಿಳೆಯರು ಕೇಂದ್ರ ಸಚಿವರಾದರು ಎಂದರು.

ಆದರೆ ನಮ್ಮ ತೆಲಂಗಾಣದಲ್ಲಿ ಮೊದಲ ವರ್ಷದಲ್ಲಿ ಯಾವುದೇ ಕೇಂದ್ರ ಸಚಿವಾಲಯದಲ್ಲಿ ಒಬ್ಬ ಮಹಿಳೆಯೂ ಮಂತ್ರಿಯಾಗಲಿಲ್ಲ. ಆದ್ದರಿಂದ ಮಹಿಳಾ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಎಲ್ಲಾ ಮಹಿಳೆಯರ ಪರವಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

modi 3

ಭವಿಷ್ಯದಲ್ಲಿ ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದೆ. ಭಾರತೀಯ ಜನತಾ ಪಕ್ಷವು 7 ವರ್ಷಗಳಲ್ಲಿ ಅತ್ಯಂತ ಕ್ರಿಯಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದು ಪೌರತ್ವ (ತಿದ್ದುಪಡಿ) ಕಾಯಿದೆಗೆ ಧ್ವನಿಯಾಗಿರಲಿ, ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸಿರುವುದಾಗಲಿ, ತ್ರಿವಳಿ ತಲಾಖ್, ಮದುವೆಯ ಕನಿಷ್ಠ ವಯಸ್ಸಿನ ಮಿತಿ, ರಾಮ ಮಂದಿರ ನಿರ್ಮಾಣ ಹೀಗೆ ಅನೇಕ ಕ್ರಿಯಾತ್ಮಕ ನಿರ್ಧಾರಗಳನ್ನು ಭಾರತೀಯ ಜನತಾ ಪಕ್ಷವು ಈ 7 ವರ್ಷಗಳಲ್ಲಿ ತೆಗೆದುಕೊಂಡಿದೆ. ಹೀಗಾಗಿ ನಮಗೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ವೈಟಿಪಿ ನಾಯಕ ಮಾತನಾಡಿ, ತೆಲಂಗಾಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನಮ್ಮ ರಾಜ್ಯದ ಸಂಜಯ್ ಬಂಡಿ ಅವರ ನೇತೃತ್ವದಲ್ಲಿ ನಾವು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಂತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

AMITH SHA

ಯುವ ತೆಲಂಗಾಣ ಪಕ್ಷದ ಅಧ್ಯಕ್ಷ ಜೆ ಬಾಲಕೃಷ್ಣನ್ ಮಾತನಾಡಿ, ನಾವು ತೆಲಂಗಾಣದ ಜನರನ್ನು ಟಿಆರ್‍ಎಸ್ ಆಡಳಿತದಿಂದ ಮುಕ್ತಗೊಳಿಸಲು ಬಯಸುತ್ತೇವೆ. ಟಿಆರ್‍ಎಸ್‍ನಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ನಾವು ನಮ್ಮ ಯುವಕರೊಂದಿಗೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದರು.

ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿರುವ ಕಾರಣ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *