Bengaluru CityCinemaDistrictsKarnatakaLatestMain PostSandalwood

ಪುನೀತ್ ಸಿನಿಮಾದ ಕಥೆಗೆ ಯುವರಾಜ್ ಕುಮಾರ್ ನಾಯಕ?

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಸಿದ್ಧಪಡಿಸಿದ್ದ ಚಿತ್ರ ಕಥೆಗೆ ಯುವರಾಜ್ ಕುಮಾರ್ ಆಯ್ಕೆಮಾಡಲಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಪುನೀತ್ ರಾಜ್ ಕುಮಾರ್ ಅವರ ಕೈಯಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಿದ್ದವು. ಆದರೆ ಅಪ್ಪು ನಿಧನದಿಂದ ಎಲ್ಲ ಸಿನಿಮಾಗಳು ಹಾಗೆಯೇ ಉಳಿದಿದೆ. ಇನ್ನೂ ಪುನೀತ್ ರಾಜ್‌ಕುಮಾರ್‌ಗಾಗಿತ್  ಸಿದ್ಧಪಡಿಸಿದ್ದ ಕಥೆಗಳನ್ನು ಏನು ಮಾಡಬೇಕೆಂದು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಗೊಂದಲವಾಗಿತ್ತು. ಇದೇ ಗೊಂದಲದಲ್ಲಿದ್ದ ನಿರ್ದೇಶಕರಲ್ಲಿ ಸಂತೋಷ್ ಆನಂದ್ ರಾಮ್ ಕೂಡ ಒಬ್ಬರು. ಇದನ್ನೂ ಓದಿ: ಫ್ರೆಂಡ್ಸ್ ಗ್ಯಾಂಗ್ ಜೊತೆ ರಾಯನ್ ರಾಜ್‌ ಸರ್ಜಾ

ಸದ್ಯ ಸಂತೋಷ್ ಆನಂದ್ ರಾಮ್ ಅವರು ಪುನೀತ್‍ಗಾಗಿ ಬರೆದಿದ್ದ ಕಥೆಯಲ್ಲಿ ನಾಯಕ ನಟರಾಗಿ ಯುವರಾಜ್ ಕುಮಾರ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬೀನೇಷನ್‍ನಲ್ಲಿ ಬಂದ ರಾಜಕುಮಾರ ಹಾಗೂ ಯುವರತ್ನ ಎರಡು ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವುದರ ಜೊತೆಗೆ ಸೂಪರ್ ಡೂಪರ್ ಹಿಟ್ ಆಗಿತ್ತು. ನಂತರ ಇಬ್ಬರು ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ಕೆಲಸಮಾಡುವ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಆದರೆ ವಿಧಿಯಾಟ ಪುನೀತ್ ಇಂದು ನಮ್ಮೊಂದಿಗಿಲ್ಲ.

Yuvaraj Kumar

ಹಾಗಾಗಿ ಪುನೀತ್‍ಗಾಗಿ ಬರೆದಿದ್ದ ಕಥೆಯನ್ನು ಯುವರಾಜ್‌ಕುಮಾರ್‌ಗೆ ಮಾಡಿ ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಹೀಗಾಗಿ ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿ ಸಂತೋಷ್ ಆನಂದ್ ರಾಮ್ ಯುವರಾಜ್ ಕುಮಾರ್ ಅವರನ್ನು ತಮ್ಮ ಸಿನಿಮಾಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

ಈ ಮುನ್ನ ಖಾಸಗಿ ವಾಹಿನಿಯೊಂದರಲ್ಲಿ ಯುವರಾಜ್ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿದ್ದರು. ಇದೀಗ ಪುನೀತ್ ಅವರಿಗಾಗಿಯೇ ಮಾಡಿರುವ ಕಥೆಯ ಮೂಲಕ ಕನ್ನಡಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

Back to top button