ನಗುಮುಖದ ರಾಜಕುಮಾರ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಇಂದು (ಮಾ.17) 50ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಚಿಕ್ಕಪ್ಪನ ಸ್ಮಾರಕಕ್ಕೆ ಯುವ ರಾಜ್‌ಕುಮಾರ್ ಪೂಜೆ ಸಲ್ಲಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿ ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತದೆ ಎಂದು ಯುವ (Yuva Rajkumar) ಮಾತನಾಡಿದ್ದಾರೆ. ಇದನ್ನೂ ಓದಿ:‘ಅಪ್ಪು’ ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಮಾಧ್ಯಮಕ್ಕೆ ಮಾತನಾಡಿದ ಯುವ, ಮೊದಲಿಗೆ ನಮ್ಮ ಚಿಕ್ಕಪ್ಪನಿಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬೆಳಗ್ಗೆ 6 ಗಂಟೆಯಿಂದಲೇ ಕಂಠೀರವ ಸ್ಟುಡಿಯೋದಲ್ಲಿನ ಸ್ಮಾರಕದ ಬಳಿ ಜನ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆನೇ ಇದ್ದಾರೆ ಅನಿಸುತ್ತದೆ. ‘ಅಪ್ಪು’ ಸಿನಿಮಾ ರೀ-ರಿಲೀಸ್ ಆದಾಗಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡಿದ್ರು. ಅಪ್ಪು ರೀ-ರಿಲೀಸ್‌ನಲ್ಲೂ ಅಷ್ಟೇ ಪವರ್, ಎನರ್ಜಿ, ಸೆಲೆಬ್ರೇಷನ್ ಇತ್ತು ಎಂದಿದ್ದಾರೆ.
ಅವರ ಹೆಸರಲ್ಲಿ ಪ್ರತಿ ವರ್ಷ ಅಭಿಮಾನಿಗಳು ಅನ್ನದಾನ, ರಕ್ತದಾನ, ಶಿಬಿರಗಳನ್ನ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಖುಷಿಯಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್
ಇನ್ನೂ ಅಭಿಮಾನಿಗಳ ಆರಾಧ್ಯ ಪುನೀತ್ 50ನೇ ಹುಟ್ಟುಹಬ್ಬದ ಹಿನ್ನೆಲೆ ಅಪ್ಪು ಸ್ಮಾರಕಕ್ಕೆ ಜನಸಾಗರದಂತೆ ಫ್ಯಾನ್ಸ್ ಬರುತ್ತಿದ್ದಾರೆ. ನಮ್ಮೊಡನೆ ಇಲ್ಲ ಎಂಬ ಕಹಿ ಸತ್ಯ ಗೊತ್ತಿದ್ದರೂ ಅಪ್ಪು ಮೇಲಿನ ಪ್ರೀತಿ ಫ್ಯಾನ್ಸ್‌ಗೆ ಕಿಂಚಿತ್ತೂ ಕಮ್ಮಿಯಾಗಿಲ್ಲ.