‘ಯುವ’ (Yuva) ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ಹೊಸೆಪೇಟೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಯುವ’ ಸಿನಿಮಾದ ಇವೆಂಟ್‌ನಲ್ಲಿ ನಾನು ಹೋದ ಕಡೆಯೆಲ್ಲಾ ಅಪ್ಪು ಮಗ ಬಂದ ಅಂತ ಕರೆಯುತ್ತಾರೆ ಎಂದು ಅಪ್ಪುರನ್ನು (Puneeth Rajkumar) ಸ್ಮರಿಸಿ ಯುವರಾಜ್‌ಕುಮಾರ್ ಭಾವುಕರಾಗಿದ್ದಾರೆ.



View this post on Instagram
ನಿಮ್ಮ ಮುಂದೆ ಬಂದು ನಿಲ್ಲಬೇಕು ಅಂದರೆ, ಏನಾದ್ರೂ ಒಂದು ಕಾನ್ಫಿಡೆನ್ಸ್ ಇರಬೇಕಲ್ವಾ? ಏನೂ ಮಾಡದೇ ಏನು ಬಂದು ಕಿತ್ತಾಕ್ಲಿ ಇಲ್ಲಿ? ನೀವು ಬಂದು ಕೇಳಲ್ವಾ? ನಿಮಗೆ ಹಕ್ಕಿಲ್ವಾ? ಇವತ್ತು ನಮ್ಮ ಇಡೀ ಮನೆ. ಇಡೀ ಕುಟುಂಬ ನಡೆಯುತ್ತಿರೋದೇ ನಿಮ್ಮಿಂದ. ಇದು ಸತ್ಯವಾದ ಮಾತು. ನಿಮ್ಮೆಲ್ಲರಿಗೂ ಗೊತ್ತು, ನನಗೆ ಬೇರೆ ಕೆಲಸ ಇಲ್ಲ. ನಮಗೆ ಗೊತ್ತಿರೋದೇ ಸಿನಿಮಾ. ನಿಮ್ಮೆಲ್ಲರಿಗೆ ಸಂತೋಷ ಹಾಗೂ ಪ್ರೀತಿ ಕೊಡುವುದೇ ಜವಾಬ್ದಾರಿ ಎಂದು ಯುವ ಹೇಳಿದ್ದಾರೆ.
ನಮ್ಮ ಚಿಕ್ಕಪ್ಪ ಯಾವಾಗಲೋ ಹೇಳಿದ್ರಂತೆ ವಿಜಯ್ ಕಿರಗಂದೂರು ಸರ್‌ಗೆ ನೀವು ಗುರು ಸಿನಿಮಾ ಮಾಡಬೇಕು ಅಂತ. ಆ ಮೇಲೆ ನಮ್ಮ ಆಂಟಿ ಹೇಳಿದ್ರು. ನೀವೇ ಗುರುನಾ ಲಾಂಚ್ ಮಾಡಬೇಕು ಅಂತ. ಆ ಮೇಲೆ ಎಷ್ಟೋ ಜನ ಸಂತೋಷ್ ಸರ್‌ಗೆ ನೀವು `ಯುವ’ ಜೊತೆ ಸಿನಿಮಾ ಮಾಡಿ ಅಂತ. ಅದು ನನಗೆ ಗೊತ್ತು. ಈ ಸಿನಿಮಾ ಆಗಿದ್ದೇ ನಿಮ್ಮಿಂದ. ನೀವೇ ಕರೆದುಕೊಂಡು ಬಂದಿದ್ದೀರ. ನೀವೇ ನಿಲ್ಲಿಸಿದ್ದೀರ. ಇಲ್ಲಿಂದ ನೀವು ಹೇಗೆ ಕರಕೊಂಡು ಹೋಗ್ತೀರಾ ಅದು ನಿಮಗೆ ಬಿಟ್ಟಿದ್ದು, ನನಗೆ ದಾರಿ ಕಾಣದೇ ಇರುವ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆ ಸಾಥ್ ನೀಡಿದ್ದಾರೆ ಎಂದು ಯುವ ರಾಜ್‌ಕುಮಾರ್ (Yuva Rajkumar) ಮಾತನಾಡಿದ್ದಾರೆ.
ಅಂದಹಾಗೆ, ‘ಯುವ’ ಸಿನಿಮಾ ಇದೇ ಮಾರ್ಚ್ 29ಕ್ಕೆ ರಿಲೀಸ್ ಆಗುತ್ತಿದೆ. ಯುವಗೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.


