ವರನಟ ರಾಜ್ಕುಮಾರ್ (Rajkumar) ಅವರ ಮೊಮ್ಮಗ ಯುವ ರಾಜ್ಕುಮಾರ್ (Yuva Rajkumar) ಅವರು ಸ್ಯಾಂಡಲ್ವುಡ್ಗೆ (Sandalwood) ಎಂಟ್ರಿ ಕೊಡಲು ತೆರೆಮರೆಯಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ ಯುವ ಚೊಚ್ಚಲ ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ಸಿಗದೇ ಫ್ಯಾನ್ಸ್ ನಿರಾಶರಾಗಿದ್ದಾರೆ. ಈ ನಡುವೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅಪ್ಪು (Appu) ಹುಟ್ಟುಹಬ್ಬದಂದು ಯುವ ಸಿನಿಮಾ ಕುರಿತು ಬಿಗ್ ಅಪ್ಡೇಟ್ ಸಿಗಲಿದೆ.
ಅಪ್ಪು ನಿಧನದ ನಂತರ ಯುವ ರಾಜ್ಕುಮಾರ್ ಅವರ ಚೊಚ್ಚಲ ಸಿನಿಮಾಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯುವ ರಾಜ್ಕುಮಾರ್ ಅವರಲ್ಲಿ ಪುನೀತ್ ಅವರನ್ನ ಅಭಿಮಾನಿಗಳು ಕಾಣುತ್ತಿದ್ದಾರೆ. ಕಳೆದ ವರ್ಷ ಫೋಟೋಶೂಟ್ ಮೂಲಕ ಹೊಂಬಾಳೆ ಸಂಸ್ಥೆ (Homabale Films) ಯುವ ಚೊಚ್ಚಲ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಈಗ ಯುವ ಮೊದಲ ಚಿತ್ರದ ಬಗ್ಗೆ ಹೊಸ ಸುಳಿವು ಸಿಕ್ಕಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್
ಯುವರಾಜ್ಕುಮಾರ್ ಚೊಚ್ಚಲ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಆದರೆ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ತಾಜಾ ಸಮಾಚಾರ ಏನಪ್ಪಾ ಅಂದ್ರೆ, ಸದ್ದಿಲ್ಲದೇ ಚಿತ್ರದ ಟೀಸರ್ ಶೂಟಿಂಗ್ ನಡೀತಿದೆ ಎನ್ನಲಾಗ್ತಿದೆ. ಸ್ಪೆಷಲ್ ಟೀಸರ್ ರಿಲೀಸ್ ಮಾಡಿ ಯುವ ಚೊಚ್ಚಲ ಚಿತ್ರಕ್ಕೆ ಚಾಲನೆ ನೀಡುವ ಪ್ರಯತ್ನದಲ್ಲಿದೆಯಂತೆ ಚಿತ್ರತಂಡ. ಟೀಸರ್ ಜೊತೆ ಟೈಟಲ್ ಅನೌನ್ಸ್ ಆದರೂ ಅಚ್ಚರಿ ಪಡಬೇಕಿಲ್ಲ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಅದೇ ದಿನ ಟೀಸರ್ ಕೂಡ ರಿಲೀಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಹೊಂಬಾಳೆ ಸಂಸ್ಥೆ ಮೂಲಕ ರಾಜಕುಮಾರ, ಯುವರತ್ನ, ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ (Santhosh anandram) ಡೈರೆಕ್ಷನ್ ಮಾಡಿದ್ದಾರೆ. ಯುವನ ಚೊಚ್ಚಲ ಚಿತ್ರಕ್ಕೂ ಇವರೇ ನಿರ್ದೇಶನ ಮಾಡುತ್ತಿದ್ದಾರೆ.
ಸಂತೋಷ್ ಆನಂದ್ ರಾಮ್ – ಪುನೀತ್ ಕಾಂಬಿನೇಷನ್ನಲ್ಲಿ `ರಾಜಕುಮಾರ’ ಮತ್ತು `ಯುವರತ್ನ’ ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಯುವ ರಾಜ್ಕುಮಾರ್ ಮೊದಲ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಬೆಟ್ಟದಷ್ಟಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k