ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಘಳಿಗೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾದ ಟೀಸರ್ ಜೊತೆ ಪವರ್‌ಫುಲ್ ಟೈಟಲ್ ಕೂಡ ಅನಾವರಣವಾಗಿದೆ.
ಡಾ.ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಖ್ಯಾತ ನಿರ್ದೇಶಕ ಸಂತೋಷ್ ರಾಮ್ ಜೊತೆ ಯುವ ಕೈಜೋಡಿಸಿದ್ದಾರೆ. ಅಪ್ಪು ಅಭಿಮಾನಿಗಳ ಕನಸಿಗೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಇದೀಗ ಯುವ ನಟನೆಯ ಮೊದಲ ಸಿನಿಮಾ ಮುಹೂರ್ತ ನೆರವೇರಿದೆ. ಟೀಸರ್ ಜೊತೆ ಟೈಟಲ್ ಕೂಡ ರಿವೀಲ್ ಆಗಿದೆ. ಈ ಶುಭ ಸಂದರ್ಭದಲ್ಲಿ ಯುವ ಮತ್ತು ಚಿತ್ರತಂಡ ಜೊತೆ ಶಿವಣ್ಣ, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಡಾ.ರಾಜ್ ಪರಿವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
View this post on Instagram
 
ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಬಗ್ಗೆ ಗಾಂಧಿನಗರದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. `ಜ್ವಾಲಾಮುಖಿ’ ಅಥವಾ `ಅಶ್ವಮೇಧ’ ಈ ಎರಡು ಟೈಟಲ್‌ನಲ್ಲಿ ಒಂದನ್ನ ಇಡಲಾಗುತ್ತದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಕುತೂಹಲಕ್ಕೂ ಇದೀಗ ತೆರೆ ಬಿದ್ದಿದೆ.
ಡಾ.ರಾಜ್ ಅವರ ಮೊಮ್ಮಗ `ಯುವ’ ನಟನೆಯ ಮೊದಲ ಚಿತ್ರಕ್ಕೆ ಯುವ ಎಂದೇ ಟೈಟಲ್ ಇಡಲಾಗಿದೆ. ಬೈಕ್‌ನಲ್ಲಿ ಯುವ ಕುಳಿತಿರುವ ಪೋಸ್ಟರ್ ಲುಕ್ ರಿವೀಲ್ ಆಗಿದ್ದು, ರಗಡ್ ಲುಕ್‌ನಲ್ಲಿ ಯುವ ಮಿಂಚಿದ್ದಾರೆ. ಫಸ್ಟ್ ಲುಕ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೆ ಹರಿಯುತ್ತದೆ ಎಂಬ ಖಡಕ್ ಡೈಲಾಗ್ ಹೇಳುವ ಮೂಲಕ `ಯುವ’ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಈ ವರ್ಷ ಡಿಸೆಂಬರ್ 22ಕ್ಕೆ ಸಿನಿಮಾ ತೆರೆಗೆ ಬರಲಿದೆ.



