ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ (Yuva Rajkumar) ನಟನೆಯ 2ನೇ ಸಿನಿಮಾದ ಟೈಟಲ್ ಅನ್ನು ಇಂದು (ನ.1) ಅನೌನ್ಸ್ ಮಾಡಿದ್ದಾರೆ. ಕ್ಯಾಚಿ ಟೈಟಲ್‌ನೊಂದಿಗೆ ಯುವ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ
ಯುವ ನಟನೆಯ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಆಯುಧವೊಂದನ್ನು ಹಿಡಿದು ರಕ್ತಸಿಕ್ತವಾಗಿ ಯುವ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ. ಈ ಸಿನಿಮಾಗೆ ‘ಎಕ್ಕ’ (Ekka) ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಪೋಸ್ಟರ್ ಶೇರ್ ಮಾಡಿ, ಪ್ರಪಂಚದ ಪಾಪದಲ್ಲಿ, ಎಲ್ಲರೂ ಪಾಲುದಾರರೂ ಎಂದು ಯುವ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
‘ಎಕ್ಕ’ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ಮತ್ತು ಪಿಆರ್‌ಕೆ ಸಂಸ್ಥೆಯ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneethrajkumar), ಜಯಣ್ಣ & ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ.
ಇನ್ನೂ ಕಳೆದ ವರ್ಷ ‘ಯುವ’ ಸಿನಿಮಾದ ಮೂಲಕ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಅವರು ಮೆಚ್ಚುಗೆ ಗಳಿಸಿದರು. ಈ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾದರು. ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು.