ಬೆಂಗಳೂರು: ಚಾಮುಂಡಿ ಬೆಟ್ಟ ಹತ್ತಿ ಮೈಸೂರಿನ ಯುವ ಬ್ರಿಗೇಡಿನ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಈ ಬಗ್ಗೆ ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ಟಿಟ್ಟರಿನಲ್ಲಿ ಸ್ವಯಂಸೇವಕರು ಸ್ವಚ್ಛತಾ ಕೆಲಸ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
ಮೈಸೂರು ಮಿಮ್ಸ್ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್‍ನಲ್ಲಿರುವ ಜಾಗದಲ್ಲಿ ಬರೆದಿದ್ದ ಫೋಟೋಗಳನ್ನು ಅಪ್ಲೋಡ್ ಮಾಡಿತ್ತು. ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳನ್ನು ಮಲೀನ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಸದ ಪ್ರತಾಪ್ ಸಿಂಹ, ಸಚಿವ ಜಿಟಿ ದೇವೇಗೌಡ, ತನ್ವೀರ್ ಸೇಠ್ ಮತ್ತು ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಟ್ಯಾಗ್ ಮಾಡಿ ಜನವರಿ 9ರ ಬೆಳಗ್ಗೆ 9.10ಕ್ಕೆ ಟ್ವೀಟ್ ಮಾಡಿತ್ತು.
Advertisement
Advertisement
ಈ ಟ್ವೀಟ್ ಗಮನಿಸಿದ ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತರು 2 ಗಂಟೆಯ ಒಳಗಡೆ ಸ್ಥಳಕ್ಕೆ ತೆರಳಿ ಬಣ್ಣ ಬಳಿದು ಎಲ್ಲ ಗೋಡೆ ಬರಹಗಳನ್ನು ಅಳಿಸಿ ಜಾಗವನ್ನು ಸುಂದರಗೊಳಿಸಿದ್ದಾರೆ.
Advertisement
Most of us like n share these memes. But @yuva_brigade Mysore volunteers took initiative n within next 2 hours they climbed Chamundi hills painted the rocks which people had spoiled by writing their name on it.
Complaining is an ordinary work but being a part of solution is great pic.twitter.com/QW71TwUnRR
— Chakravarty Sulibele (@astitvam) June 10, 2019
ಮಿಮ್ಸ್ ಗಳನ್ನು ನೋಡಿ ಸಾಕಷ್ಟು ಜನ ಇದಕ್ಕೆ ಲೈಕ್ಸ್ ಕೊಡುತ್ತಾರೆ ಹಾಗೂ ಶೇರ್ ಮಾಡುತ್ತಾರೆ. ಆದರೆ ಯುವ ಬ್ರಿಗೇಡ್ ಮೈಸೂರು ಸ್ವಯಂಸೇವಕರು ವಿಚಾರ ತಿಳಿದು 2 ಗಂಟೆಯಲ್ಲಿ ಚಾಮುಂಡಿ ಬೆಟ್ಟವನ್ನು ಹತ್ತಿದ್ದಾರೆ. ಬಳಿಕ ಅಲ್ಲಿನ ಬಂಡೆಕಲ್ಲು ಮೇಲೆ ಜನರು ಹೆಸರು ಬರೆದಿರುವುದನ್ನು ನೋಡಿ ಅದಕ್ಕೆ ಪೇಂಟ್ ಮಾಡಿದ್ದಾರೆ. ಸಮಸ್ಯೆಯನ್ನು ದೂರುವುದು ಸಹಜ. ಆದರೆ ಭಾಗವಾಗಿದ್ದುಕೊಂಡು ಸಮಸ್ಯೆ ಪರಿಹಾರ ಮಾಡುವುದು ಗ್ರೇಟ್ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.
ಸ್ವಯಂ ಸೇವಕರ ಈ ಕಾರ್ಯ ನೋಡಿ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Situation of Chamundi Hill View poins ..
If you are from Kerala add it in your social profile not in any public property of Mysuru like this ..@mepratap @GTDevegowda @TanveerSaitINC @SPmysuru need strict action against these .. pic.twitter.com/eB6TvktBRd
— Mysuru Memes (@MysuruMemes) June 9, 2019