ಮನೆಯಲ್ಲೇ ಮಾಡಿ ಯಮ್ಮೀ ಚೀಸ್ ಗಾರ್ಲಿಕ್ ಬ್ರೆಡ್ ಟೋಸ್ಟ್

Public TV
2 Min Read
cheese garlic bread toast

ಗಿನ ಮಕ್ಕಳು ಸಾಮಾನ್ಯವಾಗಿ ಪಿಜ್ಜಾ, ಬರ್ಗರ್, ಬ್ರೆಡ್ ಟೋಸ್ಟ್ ಮುಂತಾದ ತಿಂಡಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇವೆಲ್ಲಾ ಹೊರಗಡೆ ಅಂಗಡಿಗಳಲ್ಲಿ ದುಬಾರಿ. ಆದ್ದರಿಂದ ಇದನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಯಮ್ಮೀ ಚೀಸ್ ಗಾರ್ಲಿಕ್ ಬ್ರೆಡ್ ಟೋಸ್ಟ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

cheese garlic bread toast 2

ಬೇಕಾಗುವ ಸಾಮಗ್ರಿಗಳು:
ಬ್ರೆಡ್ – 4
ತುರಿದ ಚೀಸ್ – ಅರ್ಧ ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಜಜ್ಜಿದ ಬೆಳ್ಳುಳ್ಳಿ – 7ರಿಂದ 8
ಚಿಲ್ಲಿ ಫ್ಲೇಕ್ಸ್ – ಅರ್ಧ ಚಮಚ
ಕುಟ್ಟಿ ಪುಡಿ ಮಾಡಿದ ಕಾಳು ಮೆಣಸು – ಕಾಲು ಚಮಚ
ಬೆಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

cheese garlic bread toast 1

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಜಜ್ಜಿರುವ ಬೆಳ್ಳುಳ್ಳಿಯನ್ನು ಹಾಕಿಕೊಂಡು ಹಸಿವಾಸನೆ ಹೋಗುವವರೆಗೂ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಕುಟ್ಟಿ ಪುಡಿ ಮಾಡಿದ ಕಾಳುಮೆಣಸಸಿನ ಪುಡಿ ಹಾಕಿಕೊಳ್ಳಬೇಕು.
* ಈಗ ಈ ಮಿಶ್ರಣವನ್ನು ಬ್ರೆಡ್ ಮೇಲೆ ಹಚ್ಚಿಕೊಳ್ಳಿ. ಬಳಿಕ ಅದರ ಮೇಲೆ ತುರಿದ ಚೀಸ್ ಹಾಕಿಕೊಳ್ಳಬೇಕು. ಈಗ ಅದಕ್ಕೆ ಚಿಲ್ಲಿ ಫ್ಲೇಕ್ಸ್ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಿ.
* ನಂತರ ಒಂದು ಪ್ಯಾನ್ ಮೇಲೆ ಈ ಬ್ರೆಡ್ ಅನ್ನು ಇಟ್ಟುಕೊಂಡು 5ರಿಂದ 6 ನಿಮಿಷಗಳ ವರೆಗೆ ಮುಚ್ಚಿಡಿ. ಚೀಸ್ ಸ್ವಲ್ಪ ನೀರಾದ ಬಳಿಕ ಅದಕ್ಕೆ ಮತ್ತೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಸೇರಿಸಿಕೊಳ್ಳಿ. ಅದೇ ರೀತಿ ಉಳಿದ ಬ್ರೆಡ್‌ಗಳನ್ನು ಮಾಡಿಕೊಳ್ಳಬೇಕು.
* ಈಗ ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನು ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಆರೋಗ್ಯಕರ ಬಾದಾಮಿ, ಖರ್ಜೂರ ಹಾಲು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article