ಬೆಂಗಳೂರು: ಮರದ ಅಖಾಡದಲ್ಲೀಗ ಯುಗಾದಿ ಹಬ್ಬದ ಪರ್ವ. ಯುಗಾದಿ ಹಬ್ಬದ ಲೆಕ್ಕಚಾರದಲ್ಲೇ ಬೆಂಗಳೂರಿನಲ್ಲಿ ಮತಬೇಟೆಯ ಒಟ ಶುರುಬವಾಗಿದೆ. ಯುಗಾದಿ ಹಬ್ಬಕ್ಕೆ ಕಾರ್ಯಕರ್ತರಿಗೆ, ಮತದಾರರಿಗೆ ವೆರೈಟಿ ಗಿಫ್ಟ್ ಪ್ಯಾಕೇಜ್ ರೆಡಿಯಾಗಿದೆ.
ಮತದಾನದ ದಿನಕ್ಕೆ ಬೆಂಗಳೂರಿನಿಂದ ಊರಿಗೆ ಹೊರಡೋರಿಗೆ ಟಿಕೆಟ್ ಫಿಕ್ಸ್ ಆಗಿದೆ. ಆದ್ರೀಗ ಜನಪ್ರತಿನಿಧಿಗಳು ಹಬ್ಬಕ್ಕೂ ಬೆಂಗಳೂರಿನಿಂದ ಬೇರೆ ಬೇರೆ ಊರಿಗೆ ಹೋಗೋ ಬಸ್ ಟಿಕೆಟ್ ಬುಕ್ ಮಾಡಿಕೊಟ್ಟು ನಮಗೆ ಮತ ಹಾಕಿ ಅಂತಾ ನೈಸ್ ಆಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಖಾಸಗಿ, ಕೆಎಸ್‍ಆರ್‍ಟಿಸಿ ಬಸ್ ಬುಕ್ಕಿಂಗ್ ಫುಲ್ ಆಗಿದ್ದು ಹೆಚ್ಚುವರಿಯಾಗಿ ಸುಮಾರು ಆರುನೂರು ಬಸ್‍ಗಳನ್ನು ಬಿಡಲಾಗಿದೆ.
Advertisement
Advertisement
ದೂರ ದೂರಿನವರಿಗೆ ಟಿಕೆಟ್ ಆಫರ್ ಕೊಟ್ರೆ ಬೆಂಗಳೂರಿಗರಿಗೆ ಯುಗಾದಿಯ ಹೋಳಿಗೆಯೂಟ ಹಾಕಿಸುವ ಜವಾಬ್ದಾರಿಯನ್ನು ಬಹುತೇಕ ಜನಪ್ರತಿನಿಧಿಗಳೇ ತೆಗೆದುಕೊಂಡಿದ್ದಾರಂತೆ. ದಿನಸಿ ಅಂಗಡಿಗಳಿಗೆ ಹೋಲ್ ಸೇಲ್ ಯುಗಾದಿ ಐಟಂಗಳಿಗೆ ಈಗ ಭರ್ಜರಿ ಬೇಡಿಕೆ ಶುರುವಾಗಿದ್ದು, ದಿನಸಿಯಂಗಡಿಯಲ್ಲಿ ಹಬ್ಬದ ಪ್ಯಾಕೇಜ್‍ಗಳು ತಯಾರಾಗಿವೆ.
Advertisement
ಒಟ್ಟಾರೆ ಎಲೆಕ್ಷನ್ ನೆಪದಲ್ಲಿ ಭರ್ಜರಿ ಗಿಫ್ಟ್, ಮತದಾರರ ಓಲೈಕೆಗೆ ಸ್ಪೆಷಲ್ ಪ್ಯಾಕೇಜ್‍ಗಳು ತಯಾರಾಗಿದೆ. ಪಕ್ಷದ ಗಿಮಿಕ್‍ಗಳು ಏನೇ ಇರಲಿ ಜನರು ಮಾತ್ರ ಇವರ ಅಮಿಷಗಳಿಗೆ ಬಲಿಯಾಗದಿರಲಿ.