ಈ ವರ್ಷ ಸಿರಿಧಾನ್ಯಗಳ ಬೆಳೆ ಚೆನ್ನಾಗಿ ಬರುತ್ತದೆ
ಎಷ್ಟು ಬೇಕೋ ಅಷ್ಟು ಮಳೆಯಾಗುತ್ತದೆ
ಪ್ರಕೃತಿ, ತಂದೆ-ತಾಯಿಯಂದಿರನ್ನು ಗೌರವಿಸಿ
ರಾಜರುಗಳಿಗೆ ಪರಾಭವ ಉಂಟಾಗುವ ಸಾಧ್ಯತೆ ಇದೆ.
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಹಣಕಾಸಿನ ಅಡೆತಡೆಗಳು ಸಾಧ್ಯತೆ ಇದೆ. ಮಾನಸಿಕ ಚಿಂತೆ, ತೊಳಲಾಟ, ಅಂದುಕೊಂಡ ಕೆಲಸಗಳಲ್ಲಿ ಅಡೆತಡೆಗಳಾಗಲಿದೆ. ಹೊಸ ಹೂಡಿಕೆಗಳನ್ನ ಮಾಡಬೇಡಿ. ಜಾಗ್ರತೆಯಿಂದ ಹೆಜ್ಜೆ ಇಡುವುದು ಉತ್ತಮ. ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ.
ಪರಿಹಾರ : ಕುಜ ಬೀಜಾಕ್ಷರಿ ಮಂತ್ರ 108 ಬಾರಿ ಜಪಿಸಿ.
ವೃಷಭ: ಈ ವರ್ಷ ಅದ್ಭುತವಾದ ಯೋಗ ಫಲವಿದೆ. ಹಣ ಸಂಪಾದನೆ, ಕೆಲಸಗಳಲ್ಲಿ ಯಶಸ್ಸಾಗಲಿದೆ. ಪಿತ್ರಾರ್ಜಿತ ಆಸ್ತಿ ತೊಂದರೆಗಳು ನಿವಾರಣೆಯಾಗಲಿವೆ. ವಿವಾಹ ಯೋಗ, ಸಂತಾನ ಭಾಗ್ಯ, ವಿದ್ಯಾರ್ಥಿಗಳಿಗೆ ಈ ವರ್ಷ ಅನುಕೂಲ, ನೌಕರರಿಗೆ ಉನ್ನತ ಸ್ಥಾನಮಾನ ಸಿಗಲಿದೆ.
ಪರಿಹಾರ: ಶುಕ್ರ ಬೀಜಾಕ್ಷರಿ, ದುರ್ಗಾ ಚಾಲೀಸಾ ಪಠಿಸಿ.
ಮಿಥುನ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ಭೂಮಿ, ಮನೆ ಖರೀದಿ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉತ್ತಮ ವರ್ಷ, ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ.
ಪರಿಹಾರ : ಬುಧ ಬೀಜಾಕ್ಷರಿ, ವಿಷ್ಣು ಸಹಸ್ರನಾಮ ಪಠಿಸಿ.
ಕಟಕ: ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಅದೃಷ್ಟ ಕೈ ಹಿಡಿದು ದಡ ಸೇರಿಸಲಿದೆ. ಕೆಲಸ ಕಾರ್ಯಗಳಲ್ಲಿ ನಿಧಾನವಾಗಲಿದ್ದು, ಕನಸುಗಳು ಸಾಕಾರಗೊಳ್ಳುವ ಸಮಯ.
ಪರಿಹಾರ : ಚಂದ್ರ ಬೀಜಾಕ್ಷರಿ ಮಂತ್ರ ಪಠಿಸಿ.
ಸಿಂಹ: ನೋವು, ಚಿಂತೆ, ಸಂಕಟ ಸಾಧ್ಯತೆ, ಉದ್ಯೋಗ ನಷ್ಟ ಸಾಧ್ಯತೆಯಿದೆ. ಕಷ್ಟಗಳು ಹೆಚ್ಚು ಎದುರಾಗಲಿವೆ. ಹೊಸ ಕೆಲಸಗಳಿಗೆ ಕೈ ಹಾಕಬೇಡಿ.
ಪರಿಹಾರ : ರವಿ ಬೀಜಾಕ್ಷರಿ, ಆದಿತ್ಯ ಹೃದಯ ಸ್ತ್ರೋತ್ರ ಪಠಿಸಿ.
ಕನ್ಯಾ: ಈ ವರ್ಷ ಶೇ.70ರಷ್ಟು ಶುಭಫಲವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ವಿಳಂಬವಾಗಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕೋರ್ಟ್ ವ್ಯಾಜ್ಯಗಳು ಪರಿಹಾರವಾಗಲಿವೆ. ಮನೆಯಲ್ಲಿ – ಮನದಲ್ಲಿ ಶಾಂತಿ ನೆಲೆಸಲಿದೆ. ಆತುರ, ಎಡವಟ್ಟಿನ ನಿರ್ಧಾರಗಳ ಬಗ್ಗೆ ಎಚ್ಚರ. ವಿದ್ಯಾರ್ಥಿಗಳಿಗೆ ಈ ವರ್ಷ ಶುಭ, ವಿವಾಹ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಪರಿಹಾರ : ವಿಷ್ಣು ಸಹಸ್ರನಾಮ, ಇಷ್ಟ ದೇವರ ಉಪಾಸನೆ ಮಾಡಿ.
ತುಲಾ: ಈ ವರ್ಷ ಶುಭಫಲಗಳು ಹೆಚ್ಚಿವೆ. ಸಾಲದಿಂದ ಮುಕ್ತಿ ಸಿಗಲಿದೆ. ಹೊಸ ವ್ಯಾಪಾರಗಳನ್ನ ಶುರು ಮಾಡಬಹುದು. ಮದುವೆ, ಸಂತಾನದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಸಹೋದರ-ಸಹೋದರಿಯರಿಗೆ ಕಂಕಣಭಾಗ್ಯ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
ಪರಿಹಾರ : ದೀಪದುರ್ಗಾ ಸ್ತ್ರೋತ್ರ ಪಠಿಸಿ
ವೃಶ್ಚಿಕ: ಈ ವರ್ಷ ಸಿಹಿಸುದ್ದಿ ಕೇಳುವಿರಿ. ಅದೃಷ್ಟದ ವೈಭೋಗದ ಬಾಗಿಲು ತೆರೆಯಲಿದೆ. ಬದುಕು ಬದಲಾವಣೆಯ ಕಡೆಗೆ ಸಾಗಲಿದೆ. ಕೊಂಕು ಮಾತಾಡುವುದನ್ನ ಬಿಟ್ಟುಬಿಡಿ. ಆದಾಯ ಹೆಚ್ಚಾಗಿ, ಖರ್ಚು ಕಡಿಮೆಯಾಗಲಿದೆ. ಕೈಗಾರಿಕೋದ್ಯಮಿಗಳಿಗೆ ಧನಲಾಭವಾಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ, ಕೌಟುಂಬಿಕ ಕಲಹ ದೂರವಾಗಲಿದೆ. ವಿದ್ಯಾರ್ಥಿಗಳಿಗೆ ಶುಭ, ಉದ್ಯೋಗ ಯೋಗ ಸಿಗಲಿದೆ.
ಪರಿಹಾರ : ಓಂ ಭೌಮಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ
ಧನಸ್ಸು: ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಿ. ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆಯಿದೆ. ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳಿಂದ ಕಿರುಕುಳವಾಗಲಿದೆ.
ಪರಿಹಾರ : ಪ್ರತಿನಿತ್ಯ ದತ್ತಾತ್ರೇಯ ಚರಿತ್ರೆ ಪಾರಾಯಣ ಮಾಡಿ. ಗುರುವಿನ ಸೇವೆ ಮಾಡಿ, ಪ್ರತಿ ಗುರುವಾರ ಕಡಲೆಕಾಳು ದಾನ ಕೊಡಿ.
ಮಕರ: ಆರೋಗ್ಯದಲ್ಲಿ ಚೇತರಿಕೆ, ಹಣಕಾಸು ವ್ಯವಸ್ಥೆ ಸರಿಯಾಗಲಿದೆ. ಕುಟುಂಬದಲ್ಲಿರುವ ಅಸೌಕರ್ಯಗಳು ಸರಿಯಾಗಲಿದೆ. ಹೊಸ ಕೆಲಸಗಳಿಗೆ ನಾಂದಿ, ನಿಂದಿಸಿದವರು ಕ್ಷಮೆ ಕೇಳಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ವರ್ಷ, ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಯಿದೆ. ಕಟ್ಟಡ ನಿರ್ಮಾಣ ಕ್ಷೇತ್ರದವರಿಗೆ ಈ ವರ್ಷ ಉತ್ತಮವಾಗಲಿದೆ. ಖರ್ಚು ಕಡಿಮೆಯಾಗಿ ಉಳಿತಾಯ ಹೆಚ್ಚಾಗಲಿದೆ.
ಪರಿಹಾರ: ನರಸಿಂಹ ಅಷ್ಟಕ ಪಠಿಸಿ
ಕುಂಭ: ಅನಾರೋಗ್ಯ ಎದುರಾಗುವ ಸಾಧ್ಯತೆ. ದೀರ್ಘಕಾಲದ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕೋರ್ಟ್ ಕಚೇರಿ ವಿಚಾರಗಳಲ್ಲಿ ಎಚ್ಚರವಾಗಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ಹೊಸ ಕೆಲಸಗಳಿಗೆ ಕೈ ಹಾಕಬೇಡಿ. ಕಿರಿಕಿರಿ, ತಾಪತ್ರಯಗಳು ಎದುರಾಗಲಿವೆ ಎಚ್ಚರ.
ಪರಿಹಾರ : ಶನಿ ಬೀಜಾಕ್ಷರಿ ಮಂತ್ರ ಪಠಿಸಿ
ಮೀನ: ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕಷ್ಟಗಳೆಲ್ಲಾ ಪರಿಹಾರ ಆಗುವ ಕಾಲ ಸನ್ನಿಹಿತವಾಗಿದೆ. ಕೆಲಸಗಳು ಸಿಗಲಿವೆ, ಕೆಲಸ ಬದಲಾವಣೆಗೆ ಸಕಾಲ. ಜೂನ್ ನಂತರ ಗುರುಬಲ.. ಅಲ್ಲಿವರೆಗೂ ಕಾಯಿರಿ. ಜೀವನ ಬದಲಾವಣೆಯ ಪಥದ ಕಡೆಗೆ ಹೋಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಶುಭ ಸಮಯ. ಪಿತ್ರಾರ್ಜಿತ ಆಸ್ತಿ ಕೈ ಸೇರಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
ಪರಿಹಾರ : ಗುರು ಬೀಜಾಕ್ಷರಿ ಮಂತ್ರ 108 ಬಾರಿ ಪಠಿಸಿ

