ಚಿಕ್ಕಮಗಳೂರು: ದೇವರಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹಳ್ಳಿಗರ ಜೊತೆ ಮಣೇವು ಕುಣಿತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಬಿದಿರೆ ಗ್ರಾಮದ ಕರಾಳಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ದತ್ತ ಕುಣಿದು ಕುಪ್ಪಳಿಸಿದ್ದಾರೆ. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರು ಈ ಹಿಂದೆ ಕೂಡ ಹಲವು ಬಾರಿ ಮಕ್ಕಳಿಗೆ ಪಾಠ ಮಾಡಿ, ಗಾಂಧಿ ಜಯಂತಿಯಂದು ದಲಿತರ ಮನೆ ಶೌಚಾಲಯಗಳನ್ನು ಶುಚಿ ಮಾಡಿ ಗಮನ ಸೆಳೆದಿದ್ದರು. ನಾನು ಮಕ್ಕಳಿಗೆ ಪಾಠ ಮಾಡುವುದಕ್ಕೂ ಸೈ, ರಸ್ತೆ ಮಧ್ಯೆ ಕುಣಿಯುವುದಕ್ಕೂ ಸೈ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದದ ಟಾಪ್ ತಂಡಗಳು
ಆಧುನಿಕ ಭಾರತದಲ್ಲಿ ಬಹುತೇಕ ರೂಢಿ ಸಂಪ್ರದಾಯಗಳು ಕ್ರಮೇಣ ಕಣ್ಮರೆಯಾಗುತ್ತಿದೆ. ಅದರಲ್ಲಿ ಮಣೇವು ಕುಣಿತ ಕೂಡ ಒಂದು. ಗ್ರಾಮೀಣ ಭಾಗದ ಅಲ್ಲಲ್ಲೇ ಜೀವಂತವಾಗಿದೆ. ದೇವರ ಉತ್ಸವಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಶಾಸಕ ದತ್ತ ದೇವರಿಗೆ ಕಾಣಿಕೆ ನೀಡಿ ಹೆಗಲಮೇಲಿದ್ದ ಟವೆಲ್‍ನ ಕೈನಲ್ಲಿಟ್ಟುಕೊಂಡು ಸ್ಥಳೀಯರ ಜೊತೆ ರಸ್ತೆ ಮಧ್ಯೆಯೇ ಹೆಜ್ಜೆ ಹಾಕಿದ್ದಾರೆ. ತಮಟೆ ಸದ್ದನ್ನು ಆಲಿಸಿ ತಮಟೆಯ ಸದ್ದಿಗೆ ಕರೆಕ್ಟ್ ಆಗಿ ಸ್ಟೆಪ್ ಹಾಕಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಮಣೇವು ಕುಣಿತ ಮುಗಿದ ಬಳಿಕ ಮತ್ತೆ ದೇವರಿಗೆ ನಮಸ್ಕರಿಸಿದ್ದಾರೆ. ಬಿದರೆ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ದತ್ತ ಮಣೇವು ಕುಣಿತಕ್ಕೆ ಸ್ಥಳೀಯರ ಜೊತೆ ಹೆಜ್ಜೆ ಹಾಕುತ್ತಾರೆ. ಇದನ್ನೂ ಓದಿ: ಬೀದರ್‌ನ ಬ್ರಿಮ್ಸ್‌ನಲ್ಲಿ ಮಾರಾಮಾರಿ ಪ್ರಕರಣ – ಮೂವರು ಬಂಧನ