ಬೆಂಗಳೂರು: KPSC ನಡೆಸುತ್ತಿರೋ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ (Siddaramaiah) ಪರೀಕ್ಷೆ ಮುಂದೂಡಲು ಆದೇಶ ಮಾಡಬೇಕು ಅಂತ ಜೆಡಿಎಸ್ ನಾಯಕ, ಮಾಜಿ ಶಾಸಕ ವೈ.ಎಸ್.ವಿ ದತ್ತಾ (YSV Datta) ಆಗ್ರಹಿಸಿದ್ದಾರೆ.
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, KPSC ಅಂದರೆ ಪರೀಕ್ಷೆಗಳ ನಿಧಾನವಾಗಿ ಮಾಡೋದಕ್ಕೆ ಹೆಸರುವಾಸಿ. ಆದರೆ ಈಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ಅವಸರ ಮಾಡ್ತಿದೆ. ಆಗಸ್ಟ್ 25ಕ್ಕೆ ಬ್ಯಾಂಕಿಂಗ್ ಪರೀಕ್ಷೆ ಇದೆ. ಹೀಗಾಗಿ ಒಂದು ತಿಂಗಳು ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಮನವಿ ಮಾಡಿದ್ರು. ಸಿಎಂ ಮಧ್ಯೆ ಪ್ರವೇಶದಿಂದ ಆಗಸ್ಟ್ 25ಕ್ಕೆ ಪರೀಕ್ಷೆ ರದ್ದು ಮಾಡಿ ಆಗಸ್ಟ್ 27ಕ್ಕೆ ಪರೀಕ್ಷೆ ಮಾಡೋದಾಗಿ KPSC ಹೇಳ್ತಿದೆ. ಇದರಿಂದ 1 ಲಕ್ಷ ಅಭ್ಯರ್ಥಿಗಳಿಗೆ ಅನ್ಯಾಯ ಆಗ್ತಿದೆ. 1 ತಿಂಗಳು ಪರೀಕ್ಷೆ ಮುಂದೂಡಿ ಅಂತ ಮನವಿ ಮಾಡಿದರೂ ಕೇಳುತ್ತಿಲ್ಲ ಅಂತ ಆರೋಪ ಮಾಡಿದರು. ಇದನ್ನೂ ಓದಿ: ಮಗಧೀರ ವಿಲನ್ ಈಗ ಹೀರೋ- ದೇವ್ ಗಿಲ್ ನಟನೆಯ ‘ಅಹೋ ವಿಕ್ರಮಾರ್ಕ’ ಚಿತ್ರದ ಸಾಂಗ್ ರಿಲೀಸ್
Advertisement
Advertisement
ಸಿಎಸ್ (ರಾಜ್ಯ ಮುಖ್ಯಕಾರ್ಯದರ್ಶಿ) ಅವರನ್ನು ಕೇಳಿದ್ರೆ ಈಗಾಗಲೇ ಪ್ರಶ್ನೆ ಪತ್ರಿಕೆ ಮುದ್ರಣ ಆಗಿದೆ. ಪರೀಕ್ಷೆ ಆಗಲೇಬೇಕು ಅಂತ ಹೇಳ್ತಿದ್ದಾರೆ. ಪರೀಕ್ಷೆಗೆ ಒಂದು ವಾರ ಮುಂಚೆ ಪ್ರಶ್ನೆ ಪತ್ರಿಕೆ ಮುದ್ರಣ ಆಗಬೇಕು. ಇಷ್ಟುಬೇಗ ಯಾಕೆ KPSC ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿತು. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತ ವಿರೋಧಿಗಳು – ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಸಿಎಂ ಆಕ್ಷೇಪ
Advertisement
ಅನೇಕ ಜನ KPSC ಸದಸ್ಯರು ನಿವೃತ್ತಿ ಆಗ್ತಿದ್ದಾರೆ. ನಿವೃತ್ತಿ ಆಗೋದ್ರೊಳಗೆ ಪರೀಕ್ಷೆ ಮುಗಿಸುವ ಪ್ಲ್ಯಾನ್ ಮಾಡ್ತಿದ್ದಾರೆ ಅನ್ನೋ ಅನುಮಾನ ಇದೆ. ಇದೆಲ್ಲ ನೋಡಿದರೆ KPSC ಮೇಲೆ ದೊಡ್ಡ ಅನುಮಾನ ಬರ್ತಿದೆ ಅಂತ ತಿಳಿಸಿದರು. ಒಂದು ತಿಂಗಳು ಪರೀಕ್ಷೆ ಮುಂದೂಡಬೇಕು. ಸಿಎಂ ಸಿದ್ದರಾಮಯ್ಯ ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಪರಿಹಾರ ಮಾಡಬೇಕು ಅಂತ ಸಿಎಂಗೆ ಒತ್ತಾಯ ಮಾಡಿದರು. ಇದನ್ನೂ ಓದಿ: ಮಾಂಸಾಹಾರ ಸೇವನೆ ಬಳಿಕ ಕುಟುಂಬದ ನಾಲ್ವರು ಸಾವು ಪ್ರಕರಣ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ