ಹೈದರಬಾದ್: ಆಡಳಿತ ಪಕ್ಷ ಭಾರತೀಯ ರಾಷ್ಟ್ರೀಯ ಸಮಿತಿಯ ಶಾಸಕರೊಬ್ಬರ (BRS) ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ (Y.S.Jagan Mohan Reddy) ಸಹೋದರಿ ಹಾಗೂ ವೈಎಸ್ಆರ್ ತೆಲಂಗಾಣ ಪಾರ್ಟಿಯ (YSRTP) ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರನ್ನು ತೆಲಂಗಾಣದ ಮೆಹಬೂಬಾಬಾದ್ನ ಬೆತೋಲ್ನಲ್ಲಿ ಬಂಧಿಸಲಾಗಿದೆ. ಅಲ್ಲದೇ ಶರ್ಮಿಳಾ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ (SC, ST atrocities case) ಅಡಿ ಪ್ರಕರಣ ದಾಖಲಿಸಲಾಗಿದೆ.
Advertisement
ಶರ್ಮಿಳಾ ಅವರು ಮೆಹಬೂಬಾಬಾದ್ ನಗರದ ಶಾಸಕ ಶಂಕರ್ ನಾಯ್ಕ್ ವಿರುದ್ಧ ಪಕ್ಷದ ಸಭೆಯೊಂದರಲ್ಲಿ ಮಾನಹಾನಿ ಪದಗಳ ಬಳಕೆ ಮಾಡಿದ್ದರು. ದರೋಡೆ, ಅಕ್ರಮ, ಭೂ ಒತ್ತುವರಿ, ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್ಎಸ್ ಮಂಡಲ್ ಅಧ್ಯಕ್ಷ ಲುನಾವತ್ ಅಶೋಕ್ ಅವರು ಪೊಲೀಸ್ ಠಾಣೆಯಲ್ಲಿ ಶರ್ಮಿಳಾ ವಿರುದ್ಧ ದೂರು ದಾಖಲಿಸಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಶಂಕರ್ ನಾಯ್ಕ್ ವಿರುದ್ಧ ಶರ್ಮಿಳಾ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೆಹಬೂಬಾಬಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನುಷ್ಯತ್ವ ಇರೋರು ಜನ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ – ಫೇಸ್ಬುಕ್ನಲ್ಲಿ ರೋಹಿಣಿ ವಿರುದ್ಧ ರೂಪಾ ಕಿಡಿ
Advertisement
Advertisement
ಬೆತೋಲ್ನಲ್ಲಿ ಅವರು ಪಾದಯಾತ್ರೆ ನಡೆಸುತ್ತಿದ್ದ ವೇಳೆ ಅಡಳಿತ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶರ್ಮಿಳಾ ಅವರನ್ನು ಬಂಧಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಅವರನ್ನು ಹೈದ್ರಾಬಾದ್ಗೆ (Hyderabad) ಕರೆದೊಯ್ಯಲಾಯಿತು.
Advertisement
ಈ ಹಿಂದೆ ಸಹ ಶರ್ಮಿಳಾ ಅವರ ಬೆಂಬಲಿಗರು ಹಾಗೂ ಬಿಆರ್ಎಸ್ ಪಕ್ಷದ ಕಾರ್ಯಕರ್ತರೊಂದಿಗಿನ ಗಲಾಟೆ ವಿಚಾರವಾಗಿ ಹೈದ್ರಾಬಾದ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಶರ್ಮಿಳಾ ಅವರು ಕಾರಿನಲ್ಲಿರುವಾಗಲೇ ಪೊಲೀಸರು ಕಾರನ್ನು ಕ್ರೈನ್ ಮೂಲಕ ಎಳೆದೊಯ್ದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಶರ್ಮಿಳಾ ಅವರು ಜನರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಶಾಂತಿಯುತ ಪಾದಯಾತ್ರೆ ನಡೆಸುತ್ತಿದ್ದೇವೆ. ನಮ್ಮ ಜನಪ್ರಿಯತೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K. Chandrashekar Rao) ಹಾಗೂ ಅವರ ಬೆಂಬಲಿಗರು ಸಹಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ನಟ ತಾರಕ ರತ್ನ ಅಂತಿಮ ದರ್ಶನಕ್ಕೆ ತೆಲುಗು ಫಿಲ್ಮ್ ಚೇಂಬರ್ ವ್ಯವಸ್ಥೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k