ಬೆಂಗಳೂರು: ಮೆಟ್ರೋಗಳಲ್ಲಿ (Namma Metro) ಕೆಲವರು ಹುಚ್ಚಾಟವಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ (Bengaluru) ಮೆಟ್ರೋದಲ್ಲಿ ಅಂತಹದ್ದೇ ಒಂದು ಪ್ರಕರಣ ಜರುಗಿದೆ. ಯೂಟ್ಯೂಬರ್ ಒಬ್ಬನ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡ ಘಟನೆ ನಗರದಲ್ಲಿ ನಡೆದಿದೆ.
ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುವ ಪರ್ಪಲ್ ಲೈನ್ ಮೆಟ್ರೋದಲ್ಲಿ ಯೂಟ್ಯೂಬರ್ ಹುಚ್ಚಾಟ ಮಾಡಿದ್ದಾನೆ. ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!
Advertisement
Advertisement
ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್ ಮಾಡಿದ್ದ. ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್‌ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರ್ಯಾಂಕ್ ಮಾಡಿದ್ದ. ಈ ವೇಳೆ ಸಹಪ್ರಯಾಣಿಕರು ಗಾಬರಿಗೊಂಡಿದ್ದರು.
Advertisement
ಪ್ರಕರಣವನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರ್ಯಾಂಕ್ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರ್ಯಾಂಕ್ ಪ್ರಜ್ಜು ಎಂದು ತಿಳಿದುಬಂದಿದೆ. ತನ್ನದೇ ಇನ್ಸ್ಟಾಂಗ್ರಾಮ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ರೀಲ್ಸ್ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು
Advertisement
ಮೆಟ್ರೋಗಳಲ್ಲಿ ಪ್ರ್ಯಾಂಕ್ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಮುಂಬೈ, ನವದೆಹಲಿ ಮೆಟ್ರೋಗಳಲ್ಲೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಈಗ ಬೆಂಗಳೂರಿಗೂ ಕಾಲಿಟ್ಟಿದೆ.
Web Stories