ಕಾರವಾರ: ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಕಚೇರಿ ಸಿಬ್ಬಂದಿಯೊಂದಿಗೆ ನಡೆದ ಘಟನೆ ಜರುಗಿದೆ.
ಸೆ.22 ರಂದು ಶ್ರೀರಾಮ ಸೇನೆಯೊಂದಿಗೆ ಗಾಯತ್ರಿ ತಾಯಿ ಶಿವಕ್ಕ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದರ ನಂತರ ನೋಂದಣಾಧಿಕಾರಿ ಹೇಮಾ ಸೇರಿ ಏಳು ಜನರ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನೋಂಣಾಧಿಕಾರಿ ಹೇಮಾ ಅವರು ದಾಖಲೆ ಪರಾಮರ್ಷಿಸದೇ ನಿಯಮ ಮೀರಿ ಹಣ ಪಡೆದು ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಂದು ಕಚೇರಿಗೆ ಯಾವೊಬ್ಬ ಸಿಬ್ಬಂದಿಯೂ ಬಾರದೇ ಕಚೇರಿಗೆ ಬೀಗ ಹಾಕಲಾಗಿತ್ತು.
ಕಚೇರಿಗೆ ಬಂದ ಜನ ಬೀಗ ಹಾಕಿರುವುದನ್ನು ನೋಡಿ ಕೆಲಸ ಮಾಡಿಸಿಕೊಳ್ಳಲಾಗದೇ ಹಿಂತಿರುಗುವಂತಾಯಿತು. ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಇದ್ದು, ಕಚೇರಿ ಸಮಯದಲ್ಲೇ ಹೀಗೆ ಬೀಗ ಹಾಕಿ ಹೋಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.