ನವದೆಹಲಿ: ಪಾಕಿಸ್ತಾನ (Pakistan) ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಹರ್ಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಕಾಶ್ಮೀರದ ಪಹಲ್ಗಾಮ್‌ಗೂ (Pahalgam) ತೆರಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಜ್ಯೋತಿ ಇನ್‌ಸ್ಟಾದಲ್ಲಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್‌ಗೆ ತೆರಳಿದ್ದ ವಿಡಿಯೋ ಅಪ್ಲೋಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ವಿಡಿಯೋಗಳು ಈಗ ವೈರಲ್ ಆಗಿದೆ.
ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೇ 16ರಂದು ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನೆಟ್ಟಿಗರು ಈಕೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Operation Sindoor – 1 ಬ್ರಹ್ಮೋಸ್ ಕ್ಷಿಪಣಿಯ ದರ ಎಷ್ಟು? ಸ್ಪೀಡ್ ಎಷ್ಟಿರುತ್ತೆ?
Jyoti did recce of Pahalgam
Damn 🫨 pic.twitter.com/OcwqRSWBCI
— Akshit Singh 🇮🇳 (@IndianSinghh) May 17, 2025
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಜೊತೆ ಜ್ಯೋತಿ ಸಂಪರ್ಕ ಹೊಂದಿದ್ದಳು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್‌ನನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು.
पाकिस्तानी दूतावास के अधिकारी दानिश और भारतीय यूट्यूबर ज्योति मल्होत्रा की मुलाकात का ये Video देखिए…
सबसे पहले पंजाब में 2 जासूस पकड़े गए। खुलासा हुआ कि ये दोनों पाकिस्तान दूतावास में तैनात अधिकारी दानिश से जुड़े हुए थे। इसके बाद भारत सरकार ने दानिश को भारत छोड़ने का आदेश… pic.twitter.com/yNAJfsXMYy
— Sachin Gupta (@SachinGuptaUP) May 17, 2025
2023ರಲ್ಲಿ ಪಾಕ್‌ಗೆ ಹೋಗಿದ್ದ ಜ್ಯೋತಿ ಪಾಕ್ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು. ಅಲ್ಲದೇ ಪಾಕ್ ಗುಪ್ತಚರ ಏಜೆಂಟ್‌ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?
🚨Shocking 🚨
– Jyoti Molhotar’s Dadaji and his family belong to Bhawalpur, the same place where Operation Sindoor took place and where all the terror camps are located 🇵🇰.
NIA should investigate. 🙏🏻#JyotiMalhotra #YouTuber #JyotiMalhotraArrested pic.twitter.com/VtX32uxhsQ
— Mohit Kamal Rath (@mkr4411) May 17, 2025