ಬಗೆ ಬಗೆಯ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ (Armaan Malik) ಇದೀಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅರ್ಮಾನ್ ಮಲಿಕ್ ಅವರ ಇಬ್ಬರೂ ಪತ್ನಿಯರು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅರ್ಮಾನ್ ಟ್ರೋಲ್ ಆಗಿತ್ತಿದ್ದಾರೆ.
View this post on Instagram
ಯುಟ್ಯೂಬ್‌ನಲ್ಲಿ (Youtuber) ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಅರ್ಮಾನ್ ಮಲಿಕ್ ತಮ್ಮ ಖಾಸಗಿ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅರ್ಮಾನ್ ಇಬ್ಬರೂ ಪತ್ನಿಯರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಮೂಲಕ ತಮ್ಮ ಇಬ್ಬರೂ ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಗರ್ಭಿಣಿಯಾಗಿರುವ ವಿಚಾರವನ್ನ ಹಂಚಿಕೊಂಡಿದ್ದರು. ಬೇಬಿ ಬಂಪ್ ಫೋಟೋವನ್ನ ಹಂಚಿಕೊಂಡಿದ್ದರು. ಇದೀಗ ಈ ಪೋಸ್ಟ್ ನೋಡಿ ನೆಟ್ಟಿಗರು, ನಿಮಗೆ ನಾಚಿಕೆಯಾಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅರ್ಮಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ
View this post on Instagram
ಮೂವರು ಅದು ಹೇಗೆ ಒಟ್ಟಿಗೆ ವಾಸಿಸುತ್ತಿದ್ದೀರಾ. ನಿಮಗೆ ನಾಚಿಗೆಯಾಗುವುದಿಲ್ವಾ ಎಂದರೆ, ಇನ್ನೂ ಕೆಲವರು ಅರ್ಮಾನ್‌ಗೆ ಇದು ಟ್ಯಾಲೆಂಟ್ ಗುರು ಎನ್ನುತ್ತಿದ್ದಾರೆ. ಇಬ್ಬರೂ ಏಕಕಾಲಕ್ಕೆ ಪ್ರೆಗ್ನೆಂಟ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅರ್ಮಾನ್ ಅವರಿಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ. ಇದನ್ನೆಲ್ಲ ಅರಿತಿರೋ ಟ್ರೋಲಿಗರ ಕೆಂಗಣ್ಣಿಗೆ ಅರ್ಮಾನ್ ಗುರಿಯಾಗಿದ್ದಾರೆ.