– ಸಮೀರ್, ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರೂ ಕೂಡ ಅಭಿಷೇಕ್‌ಗೆ ಪರಿಚಯ ಇರಲಿಲ್ಲ
– ನನ್ನ ಮಗ ಸಮಾಜಮುಖಿ ವೀಡಿಯೋ ಅಪ್ಲೋಡ್ ಮಾಡ್ತಿದ್ದ
ಹಾಸನ: ನನ್ನ ಮಗ ಸಮಾಜಮುಖಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಅವನು ದೋಷಮುಕ್ತನಾಗಿ ಬರುತ್ತಾನೆಂಬ ನಂಬಿಕೆ ನಮಗೆ ಇದೆ ಎಂದು ಯೂಟ್ಯೂಬರ್ ಅಭಿಷೇಕ್ (Youtube Abhishek) ತಾಯಿ ಹೇಮಲತಾ ಪ್ರತಿಕ್ರಿಯಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆ ಎದುರಿಸುತ್ತಿರುವ ಪುತ್ರನ ಕುರಿತು ಮಾತನಾಡಿದ ತಾಯಿ, ನನ್ನ ಮಗ ಸೌಮ್ಯ ಸ್ವಭಾವದವನು. ಹಾಸನದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರ್ ಓದಿದ್ದ. ಆನಂತರ ಎಡಿಟಿಂಗ್ ಯೂಟ್ಯೂಬರ್ ಆಗಿ ಕೆಲಸ ಮಾಡುತ್ತಿದ್ದ. ಸಮಾಜಮುಖಿಯಾದಂತಹ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಸೌಜನ್ಯ ಹಾಗೂ ಧರ್ಮಸ್ಥಳದಲ್ಲಿ ಶವಗಳ ಹೂತ ಪ್ರಕರಣ ತನಿಖೆ ಆರಂಭವಾದಾಗ ಅಲ್ಲಿಗೆ ಹೋಗಿದ್ದ. ಅವನಿಗೆ ಮೊದಲು ಚಂದನ್‌ಗೌಡ ಪರಿಚಯವಿತ್ತು. ಸುಮಂತ್ ಒಂದೆರಡು ಬಾರಿ ಅವನಿಗೆ ಸಿಕ್ಕಿದ್ದ ಅಷ್ಟೆ. ಸಮೀರ್, ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರೂ ಅವನಿಗೆ ಪರಿಚಯ ಇರಲಿಲ್ಲ. ಧರ್ಮಸ್ಥಳಕ್ಕೆ ಹೋದಾಗ ಅಲ್ಲಿ ಅವನಿಗೆ ಪರಿಚಯವಾಗಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಯಾರೂ ಹಣದ ಆಮಿಷ ಒಡ್ಡಿಲ್ಲ: ಯೂಟ್ಯೂಬರ್ ಅಭಿಷೇಕ್ ತಂದೆ
ನನ್ನ ಮಗನಿಂದ ಮಾಹಿತಿ ಪಡೆಯಲು ಎಸ್‌ಐಟಿ ಅವರು ಕರೆದಿದ್ದಾರೆ. ನನ್ನ ಮಗನ ಮೇಲೆ ಹಲ್ಲೆ ಆದಾಗ ಭಯವಾಗಿತ್ತು. ವಾಪಸ್ ಬಂದುಬಿಡು ಅಂತ ಹೇಳೋಣ ಅನ್ನಿಸಿತ್ತು. ಅವನು ಯಾವುದೇ ತಪ್ಪು ಮಾಡದ ಕಾರಣ ಸುಮ್ಮನಿದ್ದೆವು. ನನ್ನ ಮಗ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಅವನಾಯ್ತು, ಅವರ ಕೆಲಸವಾಯ್ತು ಅಷ್ಟೆ ಎಂದು ಹೇಳಿದ್ದಾರೆ.
ನಾನು ನನ್ನ ದುಡ್ಡಿನಿಂದ ಮೊಬೈಲ್, ಕ್ಯಾಮೆರಾ ಕೊಡಿಸಿದ್ದೆವು. ಅವನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನ ಬೆಂಬಲಕ್ಕೆ ನಾವು ಇರುತ್ತೇವೆ. ಇದರಿಂದ ದೋಷಮುಕ್ತನಾಗಿ ಬರುತ್ತಾನೆ ಅನ್ನೋ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್ ಅಭಿಷೇಕ್‌ಗೆ SIT ಫುಲ್ ಗ್ರಿಲ್ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ