ಹೈದರಾಬಾದ್: ತಮ್ಮ ಹಳ್ಳಿ ಅಡುಗೆ ಮೂಲಕವೇ ವಿಶ್ವವ್ಯಾಪಿ ಫೇಮಸ್ ಆಗಿದ್ದ ಮಸ್ತ್ ಮಸ್ತಾನಮ್ಮ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.
ಬರೋಬ್ಬರಿ 107 ವರ್ಷದ ಶೆಫ್ ಆಗಿ ಯೂಟ್ಯೂಬ್ ಸ್ಟಾರ್ ಆಗಿದ್ದ ಮಸ್ತಾನಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಿಧನರಾಗಿದ್ದಾರೆ.
Advertisement
Advertisement
ಮಸ್ತಾನಮ್ಮ ಅವರ ಅಂತಿಮಮಾತ್ರೆಯನ್ನು ಯಾವುದೇ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ನಡೆಸಲಾಯಿತು. ದಾರಿಯುದ್ದಕ್ಕೂ ರಾಶಿ ರಾಶಿ ಹೂಗಳನ್ನು ಚೆಲ್ಲಿ ಮಸ್ತಾನಮ್ಮನಿಗೆ ಅಂತಿಮ ವಿದಾಯ ಹೇಳಿದರು. ಮಸ್ತಾನಮ್ಮ ಅಡುಗೆ ನೋಡಲು ಯೂಟ್ಯೂಬ್‍ನಲ್ಲಿ ಜನ ಕಾಯುತ್ತಿದ್ದರು. ಇವರು ಸಾಂಪ್ರದಾಯಿಕ ಶೈಲಿಯಲ್ಲಿ ತರಹೇವಾರಿ ಅಡುಗೆ ಮಾಡಿ ಖ್ಯಾತಿ ಪಡೆದಿದ್ದು, ಅವರ ವಿಡಿಯೋಗಳು ಯೂಟ್ಯೂಬ್ ನಲ್ಲಿ ಲಕ್ಷ ಲಕ್ಷ ವ್ಯೂ ಕಂಡಿದೆ.
Advertisement
Advertisement
ಅಂದಹಾಗೇ ಮಸ್ತಾನಮ್ಮ ಅವರಿಗೆ 11ನೇ ವರ್ಷದಲ್ಲಿ ಮದುವೆಯಾಗಿತ್ತು. ಆದರೆ ತಮ್ಮ 22ನೇ ವಯಸ್ಸಿಗೆ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ದಿನಗೂಲಿ ಕಾರ್ಮಿಕರಾಗಿ ದುಡಿದು ತಮ್ಮ ಮಕ್ಕಳನ್ನು ಸಲುಹಿದ್ದರು. ಇವರ ಖ್ಯಾತಿ ಯೂಟ್ಯೂಬ್ ಮೂಲಕ ವಿಶ್ವ ಖ್ಯಾತಿ ಪಡೆಯಿತು. ಕೇವಲ 2 ವರ್ಷದಲ್ಲಿ ದೇಶದ ಅತಿ ಹಿರಿಯ ಯೂಟ್ಯೂಬ್ ಸ್ಟಾರ್ ಎನಿಸಿಕೊಂಡ ಅವರ ಹೆಸರಿನ `ಮಾಸ್ತಾನಮ್ಮ ಚಾನೆಲ್ 12 ಲಕ್ಷ ಜನ ಚಂದಾದಾರರಿದ್ದಾರೆ. ಅಲ್ಲದೇ ಖ್ಯಾತ ಬಿಬಿಸಿ ವಾಹಿನಿ ಕೂಡ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿತ್ತು.
https://www.youtube.com/watch?v=3wAYJEBNrE8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv