ವಾಷಿಂಗ್ಟನ್: ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ (YouTube) ಮಂಗಳವಾರ ಜಾಗತ್ತಿನ ಹಲವೆಡೆ ಸ್ಥಗಿತವಾಗಿರುವುದಾಗಿ (Outage) ವರದಿಯಾಗಿದೆ. ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರು ಯೂಟ್ಯೂಬ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಯೂಟ್ಯೂಬ್ ಲೋಡ್ ಆಗುತ್ತಿಲ್ಲ ಎಂದು ನೆಟ್ಟಿಗರು ಟ್ವಿಟ್ಟರ್‌ನಲ್ಲಿ ದೂರಿದ್ದಾರೆ. ಮಂಗಳವಾರ ಬೆಳಗ್ಗೆ ಸುಮಾರು 5:30ರ ಬಳಿಕ ಯೂಟ್ಯೂಬ್ ಓಪನ್ ಆಗುತ್ತಿರಲಿಲ್ಲ.
Advertisement
Advertisement
ಯೂಟ್ಯೂಬ್ ತಾಂತ್ರಿಕ ಸಮಸ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ನೆಟ್ಟಿಗರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ದೂರು ನೀಡಿದ ಬಳಿಕ ಯೂಟ್ಯೂಬ್, ಈ ವಿಚಾರವನ್ನು ತಿಳಿಸಿರುವುದಕ್ಕೆ ಧನ್ಯವಾದ, ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉತ್ತರಿಸಿದೆ.
Advertisement
ವರದಿಗಳ ಪ್ರಕಾರ ಯೂಟ್ಯೂಬ್‌ನಲ್ಲಿ ಸಮಸ್ಯೆ ಎದುರಿಸಿರುವವರಲ್ಲಿ ಶೇ.25 ರಷ್ಟು ಬಳಕೆದಾರರು ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ತೊಂದರೆ ಅನುಭವಿಸಿದ್ದಾರೆ. ಶೇ.10 ರಷ್ಟು ಬಳಕೆದಾರರು ಯೂಟ್ಯೂಬ್ ವೆಬ್ ಪೇಜ್ ಓಪನ್ ಮಾಡಲು ಸಮಸ್ಯೆ ಎದುರಿಸಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!