ಮಂಗಳೂರು: ಫೇಸ್ ಬುಕ್ ನಲ್ಲಿ ಹಿಂದೂ ದೇವರನ್ನು ನಿಂದಿಸಿ, ಅಶ್ಲೀಲವಾಗಿ ಬಿಂಬಿಸಿ ವಿಕೃತಿ ಮೆರೆದಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಲಕ್ಷ್ಮಿ, ಶ್ರೀರಾಮ, ಸೀತೆ, ಗಣೇಶ, ಶಿವಾಜಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ಈ ಪೋಸ್ಟ್ ಗಳಲ್ಲಿ ಹೇಳಲಾಗಿದೆ.
ಬಶೀರ್ ಅಡ್ಯಾರ್ ಎಂಬ ಹೆಸರಿನಲ್ಲಿ ಈ ಪೋಸ್ಟ್ ಮಾಡಲಾಗಿದ್ದು ಲಕ್ಷ್ಮೀ ಜೊತೆ ಪ್ರಧಾನಿ ಮೋದಿ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದಾನೆ. ಮಾಡೆಲ್ ಒಬ್ಬಳ ಚಿತ್ರವನ್ನು ದೇವಿ ಚಿತ್ರಕ್ಕೆ ಎಡಿಟ್ ಮಾಡಿ ವಿಕೃತಿ ಮೆರೆದಿದ್ದಾನೆ.
Advertisement
ಇನ್ನು ಶಿವಾಜಿ ಚಿತ್ರವನ್ನು ಗೊರಿಲ್ಲಾ ಜೊತೆಗೆ ಅಂಟಿಸಿರುವ ಈ ವಿಕೃತ ಮನಸ್ಸಿನ ವ್ಯಕ್ತಿ ಅಮರ್ ಅಕ್ಬರ್ ಅಂಥೋನಿ, ಅರ್ಪಿತಾ ಸಂಘಿ ಮುಂತಾದ ಹೆಸರಿನಲ್ಲಿ ಹಲವು ಅನಧಿಕೃತ ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದಾನೆ. ಅಲ್ಲದೇ ಇತರ ಕೆಲವರು ಈ ಕಾರ್ಯಕ್ಕೆ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ವ್ಯಕ್ತಿಯ ಪೂರ್ವಾಪರ ವಿಚಾರಗಳು ಮಾತ್ರ ಯಾವುದೂ ತಿಳಿದುಬಂದಿಲ್ಲ.
Advertisement
ಈ ರೀತಿ ತಮ್ಮ ವಿಕೃತ ಮನಸ್ಸಿನಿಂದ ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿರುವ ಇಂತಹ ವ್ಯಕ್ತಿಗಳ ವಿರುದ್ಧ ಹಿಂದೂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.