Bengaluru City

ಹಂಪಿನಗರದಲ್ಲಿ ಬೈಕಲ್ಲಿ ಬಂದ ಕಾಮುಕರಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

Published

on

Share this

ಬೆಂಗಳೂರು: ನಗರದಲ್ಲಿ ಪೊಲೀಸರು ಎಷ್ಟೇ ಕಟ್ಟೇಚ್ಚರ ವಹಿಸಿದ್ರೂ, ಬೀಟ್ ಹೋದ್ರೂ ದುಷ್ಕರ್ಮಿಗಳು ಮಾತ್ರ ಅಟ್ಟಹಾಸ ಮುಂದುವರೆಸಿದ್ದಾರೆ. ಸೋಮವಾರದಂದು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಮಾಡೆಲಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಬಯಲಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಾಗಿದೆ.

ವಿಜಯನಗರ ಸಮೀಪದ ಹಂಪಿನಗರದಲ್ಲಿರುವ ಸ್ವಿಮ್ಮಿಂಗ್ ಪೂಲ್ ಬಳಿಯ ರಸ್ತೆಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಇಬ್ಬರು ಯುವತಿಯರು ವಾಕಿಂಗ್ ಹೋಗ್ತಿದ್ದರು. ಈ ವೇಳೆ ಬೈಕಲ್ಲಿ ಬಂದ ಇಬ್ಬರು ಕಾಮುಕರು ಯುವತಿಯ ಹಿಂಬದಿಗೆ ಹೊಡೆದು ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ.

ಇದರಿಂದ ತೀವ್ರ ಭಯ, ಆತಂಕಕ್ಕೆ ಒಳಗಾದ ಆ ಯುವತಿಯರು ಮತ್ತೆ ಆ ಕಾಮುಕರು ವಾಪಸ್ ಬಂದು ಎಲ್ಲಿ ದೌರ್ಜನ್ಯ ನೀಡ್ತಾರೋ ಎಂಬ ಭಯದಿಂದ ಮನೆಗೆ ವಾಪಸ್ ಆಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಎದುರಿಗಿದ್ದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಕೆಲ ಪ್ರತ್ಯಕ್ಷದರ್ಶಿಗಳು ಕಾಮುಕರ ಬೆನ್ನತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಹಂಪಿ ನಗರದಲ್ಲಿ ಪುಂಡರ ಹಾವಳಿ ಹೆಚ್ಚಿರೋ ಬಗ್ಗೆ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಗಾಗ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ ಅಂತಾರೆ ಸ್ಥಳೀಯರು.

ಕಳೆದ ವಾರವಷ್ಟೇ ಇದೇ ರಸ್ತೆಯಲ್ಲಿ ನಡೆದು ಹೋಗ್ತಿದ್ದ ಯುವತಿಯ ಕೈಯಿಂದ ಮೊಬೈಲ್ ಕಸಿದು ಕಳ್ಳರು ಬೈಕಲ್ಲಿ ಪರಾರಿಯಾಗಿದ್ರು. ಹೀಗಾಗಿ ವಿಜಯನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=kC8SySPmets

Click to comment

Leave a Reply

Your email address will not be published. Required fields are marked *

Advertisement
Advertisement