– ಚಿಕ್ಕಮಗ್ಳೂರು ಯುವಕರಿಂದ ಎಚ್ಚರಿಕೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಪ್ರವಾಸಕ್ಕೆ ಬಂದರೆ ನಿಮ್ಮ ವಾಹನವನ್ನು ಪಂಚರ್ ಮಾಡುತ್ತೇವೆ ಎಂದು ಯುವಕರು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರು ಯುವಕರು ಈ ಎಚ್ಚರಿಕೆಯನ್ನು ನೀಡಿದ್ದಾರೆ. ಮತದಾನದ ದಿನ ಯುವಕ- ಯುವತಿಯರು ಮೋಜು-ಮಸ್ತಿಗೆ ಎಂದು ಚಿಕ್ಕಮಗಳೂರು, ಮಡಿಕೇರಿ ಮತ್ತು ಮೈಸೂರಿಗೆ ಎಂದು ತೆರಳುತ್ತಾರೆ.
ಮತದಾನ ದಿನದ ಮೋಜು ಮಾಡುವ ಯುವಕರ ಪ್ಲಾನ್‍ಗೆ ಬ್ರೇಕ್ ಹಾಕಲು ವಾಟ್ಸಾಪ್‍ನಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಆಗುತ್ತಿದೆ. ಏಪ್ರಿಲ್ 18 ಮತ್ತು 23 ರಂದು ಮತದಾನ ಮಾಡಿ. ವೋಟ್ ಹಾಕದೆ ಪ್ರವಾಸಕ್ಕೆ ಬಂದರೆ ತೊಂದರೆ ಕೊಡುತ್ತೇವೆ ಎಂದು ಚಿಕ್ಕಮಗಳೂರು, ಮಡಿಕೇರಿ ಹಾಗೂ ಮೈಸೂರಿನ ಯುವಕರು ಎಚ್ಚರಿಗೆ ನೀಡುತ್ತಿದ್ದಾರೆ.
ವಾಟ್ಸಾಪ್‍ಗಳಲ್ಲಿ ವಿಶೇಷವಾಗಿ ಬೆಂಗಳೂರಿನ ಜನರನ್ನು ಯುವಕರು ಎಚ್ಚರಿಕೆ ನೀಡುತ್ತಿದ್ದಾರೆ.