ಚಿಕ್ಕಬಳ್ಳಾಪುರ: ಮನೆಯಲ್ಲಿದ್ದ ಒಂಟಿ ಮಹಿಳೆಗೆ ಮದುವೆ ಆಮಂತ್ರಣ ಪತ್ರ ನೀಡುವ ನೆಪದಲ್ಲಿ ಇಬ್ಬರು ಖದೀಮರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಳವಿಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತನಗದರಲ್ಲಿ ನಡೆದಿದೆ.
ಧನಲಕ್ಷ್ಮಿ ಹಲ್ಲೆಗೊಳಗಾದ ಮಹಿಳೆ. ರವಿ ಹಾಗೂ ರವಿಕಿರಣ್ ಇಬ್ಬರು ಯುವಕರು ಕೃತ್ಯ ನಡೆಸಿದ ಖತರ್ನಾಕ್ ಖದೀಮರು. ಅಸಲಿಗೆ ಹಲ್ಲೆಗೊಳದಾದ ಧನಲಕ್ಷ್ಮಿಯವರ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆಯೊಬ್ಬರ ಮನೆಗೆ ಬರುತ್ತಿದ್ದ ಈ ಇಬ್ಬರು ಯುವಕರು, ಮನೆಯ ಮಾಲೀಕೆ ಧನಲಕ್ಷ್ಮಿಗೆ ಮುಖ ಪರಿಚಯ ವಿತ್ತು. ಹೀಗಾಗಿ ಇನ್ ವಿಟೇಷನ್ ಕಾರ್ಡ್ ಕೊಡಬೇಕು ಎಂದು ಮನೆಗೆ ಎಂಟ್ರಿಕೊಟ್ಟಿರೋ ಖದೀಮರು ಮೊದಲು ನೀರು ಕೊಡುವಂತೆ ಕೇಳಿದ್ದಾರೆ.
- Advertisement 2-
- Advertisement 3-
ನೀರು ತರುವಷ್ಟರಲ್ಲೇ ಮಹಿಳೆ ಮೇಲೆ ಮುಗಿಬಿದ್ದ ಕಿರಾತಕರು ಆಕೆಯ ಮೇಲೆ ಹಲ್ಲೆ ಮಾಡಿ ಬಾಯಿಗೆ ಬಟೆ ತುರುಕಿದ್ದಾರೆ. ಆದರೆ ಅದೃಷ್ಟವಶಾತ್ ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳೆಲ್ಲಾ ಮನೆ ಬಳಿ ಬಂದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಓರ್ವನನ್ನು ಸ್ಥಳೀಯರು ಹಿಡಿದುಕೊಂಡರೆ, ಮತ್ತೋರ್ವ ಎಸ್ಕೇಪ್ ಆಗಿದ್ದಾನೆ.
- Advertisement 4-
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಚಿನ್ನದ ಸರ ಕಳವಿಗೆ ಮನೆಗೆ ಪ್ಲಾನ್ ಮಾಡಿಕೊಂಡು ಹೋಗಿದ್ದೀವಿ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.