ಪಾಟ್ನಾ: ಜನನಾಯನೊಬ್ಬ ತನಗೆ ಮತಹಾಕಲಿಲ್ಲ ಎಂಬ ಕಾರಣಕ್ಕೆ ತಾನು ಉಗುಳಿದ್ದನ್ನು ತಿನ್ನುವಂತೆ ಯುವಕನೊಬ್ಬನಿಗೆ ಒತ್ತಾಯಿಸಿರುವ ಅಮಾನವೀಯ ಘಟನೆ ಬಿಹಾರದ ಔರಂಗಾಬಾದ್‍ನಲ್ಲಿ ನಡೆದಿದೆ.
ಅಭ್ಯರ್ಥಿ ಬಲವಂತ್ ಕುಮಾರ್ ಸೋಲಿನ ಬಳಿಕ ಇಬ್ಬರು ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್‍ಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಒಳಿಕ ನೆಲದ ಮೇಲೆ ಉಗುಳಿದನ್ನು ಒತ್ತಾಯಿಸಿ ತಿನ್ನಿದ್ದಾನೆ. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ
Advertisement
Advertisement
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರು ಅಂಬಾ ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗಿದೆ.
Advertisement
ಆರೋಪಿ ಮುಖಂಡ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಇದೀಗ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗುವುದಾಗಿ ಎಂದು ಎಸ್ಪಿ ಕಾಂತೇಶ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದು: ಓವೈಸಿ
Advertisement