ಮಂಡ್ಯ: ಎಣ್ಣೆ ಕೊಡದ್ದಕ್ಕೆ ಮಾರಕಾಸ್ತ್ರ ಹಿಡಿದು ಬಾರ್ ಮುಂದೆ ಗಲಾಟೆ ಮಾಡಿದ ಯುವಕರು

Public TV
1 Min Read
mnd galate

ಮಂಡ್ಯ: ಎಣ್ಣೆ ಕೊಡ್ಲಿಲ್ಲ ಅನ್ನೋ ಕಾರಣಕ್ಕೆ ಯುವಕರು ಮದ್ಯದಂಗಡಿ ಎದುರು ಮಾರಕಾಸ್ತ್ರ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

mnd 6

 

ಇಬ್ಬರು ಯುವಕರು ಕೆಆರ್ ಎಸ್‍ನ ಬಾರ್ ಗೆ ಬಂದು ಹಣ ಕೊಡದೇ ಎಣ್ಣೆ ಕೊಡುವಂತೆ ಕೇಳಿದ್ದಾರೆ. ಆದ್ರೆ ಇದಕ್ಕೆ ಅಂಗಡಿ ಕೆಲಸಗಾರರು ಒಪ್ಪಲ್ಲ. ಈ ವೇಳೆ ಬೈಕಿನಲ್ಲಿ ಬಂದ ಯುವಕನೊಬ್ಬ ಮಾರಾಕಾಸ್ತ್ರ ಹಿಡಿದು ಓಡಾಡಿದ್ದಾನೆ. ನಂತರ ಅವರ ಜೊತೆಯಲ್ಲಿ ಇದ್ದ ಯುವಕರೇ ಆತನಿಂದ ಮಾರಾಕಾಸ್ತ್ರ ಕಿತ್ತುಕೊಂಡು ಬೈಕಿನಲ್ಲಿ ಹೊರಟು ಹೋಗಿದ್ದಾರೆ.

mnd 4

ನಂತರವೂ ಸುಮ್ಮನಿರದ ಇಬ್ಬರು ಯುವಕರು ಅಂಗಡಿ ಬಳಿ ಬಂದು ಮಾತಿನ ಚಕಮಕಿ ನಡೆಸಿ ಸ್ಥಳದಿಂದ ಹೊರಟು ಹೋಗಿದ್ದಾರೆ. ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ಅಂಗಡಿ ಸಿಬ್ಬಂದಿ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಆರ್‍ಎಸ್ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಸಚಿನ್ ಎಂಬಾತನನ್ನು ಬಂಧಿಸಿದ್ದಾರೆ. ಭೈರ ಎಂಬ ಮತ್ತೊಬ್ಬ ಪರಾರಿಯಾಗಿದ್ದಾನೆ.

mnd 5

mnd 7

mnd 3

mnd 2

Share This Article
Leave a Comment

Leave a Reply

Your email address will not be published. Required fields are marked *