-ಬ್ಯಾಂಕಿಗೆ ವಾಪಸ್ ನೀಡಿ, ಪ್ರಾಮಾಣಿಕತೆ ಮೆರೆದ ಯುವಕರು
ನೆಲಮಂಗಲ: ಹಣ ಡ್ರಾ ಮಾಡದಿದ್ದರೂ ಎಟಿಎಂ ಮೆಷಿನ್‍ನಿಂದ ಹಣ ಬಂದಿರುವ ವಿಚಿತ್ರ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡದಿದ್ದರೂ ಎಟಿಎಂ ಮೆಷಿನ್‍ನಿಂದ ಹಣ ಬಂದಿದೆ. ನೆಲಮಂಗಲ ಟಿಬಿ ಬಸ್ ನಿಲ್ದಾಣದ ಸಮೀಪವಿರುವ ಎಸ್‍ಬಿಐ ಎಟಿಎಂನಲ್ಲಿ ಸೋಮವಾರ ಸಂಜೆ ಸ್ಟೇಟ್‍ಮೆಂಟ್ ಪಡೆಯಲು ತೆರಳಿದ್ದಾಗ, ಇದ್ದಕ್ಕಿದ್ದಂತೆ 100, 200 ಮುಖಬೆಲೆಯ ಗರಿಗರಿಯ ಸುಮಾರು 4900 ರೂ. ಹಣ ಮೆಷಿನ್ ನಿಂದ ಹೊರಬಂದಿದೆ.
ಹಣವನ್ನು ನೋಡಿ ಬೆರಗಾಗಿದ್ದ ಯುವಕರು ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಯಾಕೆಂದರೆ ಸೋಮವಾರ ಬ್ಯಾಂಕ್ ಸಮಯ ಮುಗಿದಿತ್ತು. ಸ್ನೇಹಿತರಾದ ಉಮಾಮಹೇಶ್, ಉಮೇಶ್, ಪ್ರದೀಪ್ ಬ್ಯಾಂಕ್‍ಗೆ ಹಣವನ್ನು ಹಿಂದಿರುಗಿಸಿದ್ದಾರೆ.
ಒಟ್ಟಿನಲ್ಲಿ ಹಣವನ್ನು ಕಬಳಿಸುವವರ ಮಧ್ಯದಲ್ಲಿ ಈ ಯುವಕರ ತಂಡ ಹೊಸವರ್ಷಕ್ಕೆ ಉತ್ತಮ ಕೆಲಸ ಮಾಡಿದೆ. 4900 ರೂ.ಗಳನ್ನು ಹೊಸ ವರ್ಷದ ಗಿಫ್ಟ್ ಎಂದೇ ನೋಡುವ ಜನರ ಮಧ್ಯೆ ಈ ಯುವಕರು ಹಣವನ್ನು ಬ್ಯಾಂಕ್‍ಗೆ ಹಿಂದಿರುಗಿಸಿ ಪ್ರಾಮಾಣಿಕತೆಗೆ ನಿಜವಾದ ಅರ್ಥ ನೀಡಿದ್ದಾರೆ.