ಚಿಕ್ಕಬಳ್ಳಾಪುರ: ಯುವಕರೇ ಈ ದೇಶದ ಆಸ್ತಿ, ಈ ದೇಶದ ಭಾವಿ ಪ್ರಜೆಗಳು. ಯುವಕರು ಅಡ್ಡದಾರಿ ಹಿಡಿದ್ರೆ ಇಡೀ ದೇಶದ ಗತಿ ಅಧೋಗತಿ. ಆದ್ರೆ ಅದೇ ಯುವಕರು ಮನಸ್ಸು ಮಾಡಿದ್ರೇ ಗಾಂಧಿ ಕಂಡ ರಾಮರಾಜ್ಯದ ಕನಸು ಕೂಡ ನನಸು ಮಾಡಬಹುದು ಅನ್ನೋದಕ್ಕೆ ಈ ಗ್ರಾಮದ ಯುವಕರೇ ಸಾಕ್ಷಿ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯನ್ನು ಸ್ಮಾರ್ಟ್ ಸಿಟಿಯ ಹಾಗೆ ಸ್ವಚ್ಚ ಗ್ರಾಮ, ಸ್ಮಾರ್ಟ್ ಗ್ರಾಮ ನಮ್ಮದಾಗಬೇಕು ಅಂತ ಕಾರ್ಯೋನ್ಮುಖರಾಗಿರುವ ಯುವಕರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋಗಳು.
Advertisement
Advertisement
ಇಲ್ಲಿನ ಯುವಕರು ಪ್ರತಿ ಭಾನುವಾರ ಗ್ರಾಮದ ಚರಂಡಿ, ರಸ್ತೆ, ಶಾಲೆ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನ ಸ್ವಚ್ಛ ಮಾಡುತ್ತಾರೆ. 2 ವರ್ಷಗಳಿಂದ ಗ್ರಾಮದ ಸುತ್ತಮುತ್ತ ಗಿಡ ನೆಟ್ಟು ಪೋಷಣೆ ಮಾಡುತ್ತಿದ್ದಾರೆ.
Advertisement
ನರೇಗಾ ಯೋಜನೆಯಡಿ ನಿರ್ಮಿಸಿದ ರುದ್ರಭೂಮಿ ಹಸಿರಿನಿಂದ ಕಂಗೊಳಿಸುತ್ತದೆ ಉದ್ಯಾನದಂತೆ ಕಂಡು ಬರುತ್ತದೆ. ಸ್ವಂತ ಹಣದಿಂದ ಮಳೆಕೊಯ್ಲು ಮಾಡಲು ನೀರಿನ ತೊಟ್ಟಿ ನಿರ್ಮಾಣ ಮಾಡಿದ್ದಾರೆ. ಅಂತ್ಯಕ್ರಿಯೆಗೆ ಬಂದವರಿಗೆ ಸತ್ತವರ ಹೆಸರಲ್ಲಿ ಸಸಿ ನೆಡುವಂತೆ ಪ್ರೇರೇಪಿಸುತ್ತಾರೆ.
Advertisement
ಇದಲ್ಲದೆ ನರೇಗಾ ಯೋಜನೆಯಡಿಯಲ್ಲಿ ಗುತ್ತಿಗೆದಾರರಿಗೆ ಅವಕಾಶ ಕೊಡದೆ ತಮ್ಮ ಊರಿನಲ್ಲಿ ಇವರೇ ಗುಣಮಟ್ಟದ ಚರಂಡಿ, ಸಿಮೆಂಟ್ ರಸ್ತೆಯ ಕಾಮಗಾರಿಗಳನ್ನ ಸಹ ಮಾಡಿಕೊಳ್ಳುತ್ತಿದ್ದಾರೆ. ಈ ಯುವಕರು ಹಿತ್ತಲಹಳ್ಳಿಯನ್ನು ಮದ್ಯ ಮಾರಾಟ ಮುಕ್ತ ಗ್ರಾಮ ಮಾಡಿದ್ದಾರೆ.
ಒಟ್ಟಿನಲ್ಲಿ ಸದಾ ತಮ್ಮೂರಿನ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವ ಇಂತಹ ಯುವಕರು ಪ್ರತಿ ಊರಲ್ಲಿ ಇದ್ರೆ ಎಷ್ಟು ಚೆಂದ ಅಲ್ಲವೇ.. ಈ ಯುವಕರ ಕಾರ್ಯ ಮತ್ತಷ್ಟು ಗ್ರಾಮದ ಯುವಕರಿಗೆ ಸ್ಪೂರ್ತಿಯಾಗಲಿ ಅನ್ನೋದು ನಮ್ಮ ಆಶಯ.
https://www.youtube.com/watch?v=jfzXpJ0c3jc
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews