ಮೈಸೂರು: ಯುವತಿ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ.
ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ಯುವತಿ. ಉಮೇಶ್‍ಕುಮಾರ್ ಹಾಗೂ ವಿವೇಕ್ ಎಂಬವರೇ ಕಿರುಕುಳ ನೀಡಿದ ಪುಂಡ ಯುವಕರು. ಯುವತಿ ಪಬ್‍ಗೆ ಹೋಗಿದ್ದಾಗ ಉಮೇಶ್‍ಕುಮಾರ್, ವಿವೇಕ್ ಮೊದಲಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಯುವತಿ ಕೈಗೆ ಹೊಡೆದು ಬಟ್ಟೆ ಹಿಡಿದು ಎಳೆದಾಡಿದ್ದಾರೆ.
ಸದ್ಯ ಯುವತಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ.