ಬಾಗಲಕೋಟೆ: ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಇಂದು ಭಾರತೀಯ ಸೇನೆಯ ಯೋಧರು ತಮ್ಮ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದಾರೆ. ಈ ವೇಳೆ ತೆರಳುತ್ತಿದ್ದ ಯೋಧರಿಗೆ ಜಮಖಂಡಿ ಯೋಧರು ಸನ್ಮಾನ ಮಾಡುವ ಮೂಲಕ ಬೀಳ್ಕೊಟ್ಟಿದ್ದಾರೆ.
ಜಮಖಂಡಿ ಕನಕದಾಸ ಭವನದಲ್ಲಿ ಯುವಕರು ಮೇಜರ್ ವಿವೇಕ್ ಸೇರಿದಂತೆ ಎಲ್ಲ ಯೋಧರಿಗೆ ಸನ್ಮಾನ ಮಾಡಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯದ ಮೂಲಕ ಜನ ಜಾನುವಾರುಗಳ ಜೀವ ಉಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಯುವಕರು ‘ಹೌ ಇಸ್ ದ ಜೋಷ್’, ‘ಭಾರತ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ. ಸದ್ಯ 50 ಜನ ಯೋಧರ ತಂಡ ಬೆಂಗಳೂರಿಗೆ ಆಗಮಿಸಲಿದೆ.
Advertisement
Advertisement
ಮಂಗಳವಾರ ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದರು. ಗ್ರಾಮಸ್ಥರು ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದರು. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದರು.
Advertisement
ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದರು. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.