ಸ್ನೇಹಿತನನ್ನು ಕಳೆದುಕೊಂಡಿದ್ದಕ್ಕೆ ಮಹತ್ವದ ಕೆಲಸಕ್ಕೆ ಕೈ ಹಾಕಿದ ಯುವಕರ ತಂಡ!

Public TV
1 Min Read
YOUTHS CHALLENGE COLLAGE

ಬೆಂಗಳೂರು: ರಸ್ತೆ ಗುಂಡಿಗಳಿಂದಾಗಿ ಸವಾರರು ಬಲಿಯಾಗುತ್ತಿರುವ ಹಿನ್ನೆಲೆಯಿಂದ ಬೇಸತ್ತ ಯುವಕರ ತಂಡವೊಂದು ಮಹಾನ್ ಕೆಲಸವನ್ನು ಮಾಡುವ ಮೂಲಕ ಬಿಬಿಎಂಪಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಮಾತೃಭೂಮಿ ಯುವಕರ ತಂಡ ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದೆ. ರಸ್ತೆ ಗುಂಡಿಯನ್ನು ಮುಚ್ಚದ ಬಿಬಿಎಂಪಿಯಿಂದಾಗಿ ಬೇಸತ್ತ ಈ ತಂಡ, ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಅಲ್ಲದೇ ತಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚುತ್ತಿರುವುದು ವಿಶೇಷವಾಗಿದೆ.

YOUTHS CHALLENGE 6

ಬೆಂಗಳೂರಿನ ಯಾವ ಏರಿಯಾದಲ್ಲಿ ಗುಂಡಿ ಇದ್ದರೂ ಇವರಿಗೆ ಲೊಕೇಶನ್ ಕಳುಹಿಸಿದ್ರೆ ಸಾಕು. ತಾವೇ ಬಂದು ಗುಂಡಿಯನ್ನು ಮುಚ್ಚಿ ಹೋಗುತ್ತಾರೆ. ಮಾತೃಭೂಮಿ ತಂಡ ಮೂರು ದಿನಕೊಮ್ಮೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಬಿಬಿಎಂಪಿ ಮಾಡುವ ಕೆಲಸವನ್ನು ಇವರೇ ಮಾಡಿ ಸವಾಲ್ ಹಾಕುತ್ತಿದ್ದಾರೆ.

ರಸ್ತೆ ಗುಂಡಿ ಅಪಘಾತದಲ್ಲಿ ಮಾತೃಭೂಮಿ ತಂಡ ತಮ್ಮ ಸ್ನೇಹಿತನನ್ನು ಕಳೆದುಕೊಂಡಿತ್ತು. ಹಾಗಾಗಿ ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದಾಗಿ ತಂಡದ ಯುವಕರು ಹೇಳುತ್ತಿದ್ದಾರೆ.

https://www.youtube.com/watch?v=NzvZAOJuXfU

YOUTHS CHALLENGE 7

Share This Article
Leave a Comment

Leave a Reply

Your email address will not be published. Required fields are marked *