ವಿಜಯಪುರ: ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಗಲಾಟೆ ನಡೆದ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ಆಶ್ರಮ ರಸ್ತೆ ಬಳಿಯ ಪಾರಕ ನಗರದಲ್ಲಿ ಕೈಯಲ್ಲಿ ದೊಣ್ಣೆ, ತಲವಾರ್ ಹಿಡಿದು ಯುವಕರ ಪುಂಡಾಟ ಮೆರೆದಿದ್ದಾರೆ. ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ವ್ಯಕ್ತಿ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆದಿದೆ.
ಯುವಕರ ನಡುವಿನ ಜಗಳ ಬಿಡಿಸಲು ಬಂದ ರಮೇಶ ಮೇತ್ರಿ (35) ಎಂಬಾತನ ಮೇಲೂ ಕಿಡಿಗೇಡಿಗಳು ಡೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ. ಹಲ್ಲೆಗೊಳಗಾದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಡರ ಪುಂಡಾಟಿಕೆ ಸಿಸಿಟಿವಿಯಲ್ಲಿ ಕಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.