-ಮೂವರು ಆರೋಪಿಗಳು ಅರೆಸ್ಟ್
ಶಿಮ್ಲಾ: ಯುವಕರ ತಂಡವೊಂದು ಯುವತಿಗೆ ಬಲವಂತವಾಗಿ ಮುತ್ತು ಕೊಟ್ಟು ಆಕೆಯ ಜೊತೆಯಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಹಿಮಾಚಲ ಪ್ರದೇಶದ ಕಾಂಗಡಾ ಘಾಟ್‍ನಲ್ಲಿ ನಡೆದಿದ್ದು, ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.
ಈ ಘಟನೆ ಪಾಲಂಪುರದಲ್ಲಿ ನಡೆದಿದ್ದು, ವಿಡಿಯೋದಲ್ಲಿ ಯುವಕನೊಬ್ಬ ಇಬ್ಬರು ಯುವತಿಯರ ಜೊತೆ ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಗುಂಪೊಂದು ಅಲ್ಲಿಗೆ ಬಂದು ಯುವಕನ ಮೇಲೆ ಹಲ್ಲೆ ನಡೆಸುತ್ತಾರೆ. ಗುಂಪಿನಲ್ಲಿದ್ದ ಯುವಕನೊಬ್ಬ ಈ ಸಮಯವನ್ನು ಬಳಸಿಕೊಂಡು ಯುವತಿಗೆ ಬಲವಂತವಾಗಿ ಮುತ್ತು ನೀಡಿದ್ದಾನೆ.
Advertisement
Advertisement
ಯುವಕನ ಮೇಲೆ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದವನಿಗೆ ಓಡಿ ಹೋಗುತ್ತಿದ್ದ ಮತ್ತೊಬ್ಬ ಯುವತಿಯನ್ನು ಹಿಡಿಯುವಂತೆ ಆದೇಶ ನೀಡುತ್ತಾನೆ. ತನ್ನನ್ನು ಹಿಡಿಯಲು ಬಂದ ವ್ಯಕ್ತಿಯನ್ನು ನೋಡಿ ಹೆದರಿದ ಯುವತಿ ಜೋರಾಗಿ ಕಿರುಚಿಕೊಂಡು ಓಡಲು ಪ್ರಯತ್ನಿಸುತ್ತಾಳೆ.
Advertisement
ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ ಶ್ಯಾಮ್ ಲಾಲ್, ಆರೋಪಿಗಳನ್ನು ಬಂಧಿಸಿದ್ದು, ಶುಕ್ರವಾರ ಕೋರ್ಟಿಗೆ ಹಾಜರುಪಡಿಸುತ್ತೇವೆ. ಸದ್ಯ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
ಈ ಬಗ್ಗೆ ಇನ್ನು ತನಿಖೆ ನಡೆಸುತ್ತಿರುವ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡ ಯುವಕನ ಅಂಗಡಿ ಪಂಚ್‍ರುಕಿಯಲ್ಲಿ ಇದೆ. ಮೊದಲು ಪೊಲೀಸರು ಆ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಆತ ತನ್ನ ಇಬ್ಬರು ಸ್ನೇಹಿತರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.