ಹಾಸನ: ಕ್ಷುಲ್ಲಕ ಕಾರಣಕ್ಕೆ ಹುಡುಗಿಯ ಎದುರೇ ಯುವಕರಿಬ್ಬರು ಬಡಿದಾಡಿಕೊಂಡಿರುವ ಘಟನೆ ಹಾಸನ ನಗರದ ಸ್ವಾಗತ್ ಪಾರ್ಟಿ ಹಾಲ್ ಬಳಿ ನಡೆದಿದೆ.
ಸೋಮವಾರ ರಾತ್ರಿ ಯುವಕರಿಬ್ಬರು ಕೊರಳ ಪಟ್ಟಿ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಜಗಳಕ್ಕೆ ನಿಂತಿದ್ದರು. ಈ ವೇಳೆ ಜೊತೆಯಲ್ಲಿದ್ದ ಯುವತಿಯೊಬ್ಬಳು ಮಧ್ಯ ಪ್ರವೇಶಿಸಿ ಇಬ್ಬರ ಜಗಳ ಬಿಡಿಸಲು ಮುಂದಾಗಿದ್ದಾಳೆ. ಆದರೆ ಹುಡುಗಿಯ ಮನವಿಗೂ ಕ್ಯಾರೆ ಎನ್ನದ ಇಬ್ಬರು ಯುವಕರು ಒಬ್ಬರನ್ನೊಬ್ಬರು ಹಿಡಿದು ಎಳೆದಾಡಿದ್ದಾರೆ.
ಯುವಕರಿಬ್ಬರ ಜಗಳವನ್ನು ಗಮನಿಸಿ ಸುತ್ತಲೂ ಜಮಾಯಿಸಿದ ಸಾರ್ವಜನಿಕರು ಯುವತಿ ಮತ್ತು ಯುವಕರಿಗೆ ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ. ಜಗಳ ಯಾವ ಕಾರಣಕ್ಕೆ ಶುರುವಾಯಿತು, ಅವರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಯುವಕರ ಕಿತ್ತಾಟದ ವಿಡಿಯೋವನ್ನು ಸಾರ್ವಜನಿಕರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.