ಚಿಕ್ಕಬಳ್ಳಾಪುರ: ಜಿಲ್ಲೆಯ ಹನುಮಂತಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಮದ್ಯದ ಪಾರ್ಟಿ ಜೋರಾಗಿ ನಡೆದಿದ್ದು, ಭಾಗಿಯಾಗಿದ್ದವರು ಗಾಂಜಾ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಬಂದಿರುವ ಯುವಕ-ಯುವತಿಯರು ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದು, ತೋಟದ ಮನೆಯ ಬಳಿ ಸುತ್ತಲೂ ರಾಶಿ ರಾಶಿ ಮದ್ಯದ ಬಾಟಲಿಗಳು ಬಿದ್ದಿವೆ. ಮದ್ಯದ ಪಾರ್ಟಿಯಲ್ಲಿ ಯುವಕ-ಯುವತಿಯರು ತೇಲಾಡುತ್ತಾ ನೃತ್ಯ ಮಾಡಿರುವ ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಯುವಕ-ಯುವತಿಯರು ನಶೆಯಲ್ಲಿ ತೇಲಾಡ್ತಾ ನೃತ್ಯ ಮಾಡಿದ್ದು, ಮದ್ಯದ ಜೊತೆ ಗಾಂಜಾ ಕೂಡ ಸೇವಿಸಿರಬಹುದು ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿದ ವೃತ್ತ ನಿರೀಕ್ಷಕ ಸುದರ್ಶನ್ ತೋಟದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
Advertisement
ಈ ವೇಳೆ ತೋಟದ ಮಾಲೀಕ ಕೃಷ್ಣಪ್ಪ ನವರನ್ನು ವಿಚಾರಣೆ ನಡೆಸಿದ್ದು, ನಮ್ಮ ಅಣ್ಣನ ಮಕ್ಕಳಾದ ಇಬ್ಬರ ಯುವಕರ ಜೊತೆ ಅವರ ಸ್ನೇಹಿತರು ಗಿಡಮೂಲಿಕೆಗಳ ಬಗ್ಗೆ ರಿಸರ್ಚ್ ಮಾಡಲೆಂದು ತೋಟಕ್ಕೆ ಬಂದಿದ್ದರು. ಒಂದು ದಿನ ಮದ್ಯದ ಪಾರ್ಟಿ ಆಯೋಜನೆ ಮಾಡಿದ್ದರು. ಆದರೆ ಗಾಂಜಾ ಸೇವನೆ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದರು. ಆದರೆ ಕೆಲ ಸ್ಥಳೀಯರ ಮಾಹಿತಿ ಪ್ರಕಾರ ವಿಕೇಂಡ್‍ಗಳಲ್ಲಿ ತೋಟದ ಮನೆಯಲ್ಲಿ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಬರುವ ಯುವಕ-ಯುವತಿಯರು ಕುಡಿದು ತೂರಾಡಿತ್ತುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
Advertisement
Advertisement
ಘಟನಾ ಸ್ಥಳದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದು ಪಾರ್ಟಿ ಆಯೋಜನೆ ಮಾಡಿರುವುದು ಧೃಡವಾಗುತ್ತಿದೆ. ಆದರೆ ಗಾಂಜಾ ಸೇವೆನೆ ಬಗ್ಗೆ ಧೃಡಪಟ್ಟಿಲ್ಲ. ಅಂತಹ ಯಾವುದೇ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಮುಂದೆ ಈ ರೀತಿಯ ಮದ್ಯದ ಪಾರ್ಟಿಗಳನ್ನು ಆಯೋಜನೆ ಮಾಡದಂತೆ ಸಿಪಿಐ ಸುದರ್ಶನ್ ತೋಟದ ಮಾಲೀಕ ಕೃಷ್ಣಪ್ಪಗೆ ತಾಕೀತು ಮಾಡಿದ್ದಾರೆ.
ಬೆಟ್ಟ ಗುಡ್ಡಗಳ ಪಕ್ಕದಲ್ಲೇ ಇರುವ ತೋಟದಲ್ಲಿ ಮದ್ಯದ ಪಾರ್ಟಿಗಳು ಜೋರಾಗಿ ನಡೆದಿದ್ದು, ಈ ಭಾಗದಲ್ಲಿ ಚಿರತೆ ಸಹ ಇದೆಯಂತೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಮದ್ಯದ ಪಾರ್ಟಿ ಮಾಡಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಅನ್ನೋ ಪ್ರಶ್ನೆ ಸಹ ಕಾಡುತ್ತೆ. ಹೀಗಾಗಿ ಪೊಲೀಸರು ಗಾಂಜಾ ಗಮ್ಮತ್ತು ನಡೆದಿದಿಯಾ ಅನ್ನೋ ಸತ್ಯ ಬಯಲಿಗೆ ತರುವುದರ ಜೊತೆಗೆ ಮುಂದೆ ಆಗಬಹುದಾದ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv