ಮೀನು ಹಿಡಿಯಲು ಹೋಗಿ ತುಂಗಭದ್ರಾ ನದಿ ಪಾಲಾದ ಇಬ್ಬರು ಯುವಕರು

Public TV
1 Min Read
haveri tungabhadra river choudayyadanapur

ಹಾವೇರಿ: ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ತುಂಗಭದ್ರಾ ನದಿಯಲ್ಲಿ ಮುಳಗಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.

haveri tungabhadra river choudayyadanap 2ur 1

ನೀರು ಪಾಲಾದವರನ್ನು ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಫಕ್ಕಿರೇಶ್ ಹೊನ್ನಪ್ಪ ಮಣ್ಣೂರು(23), ಯಲ್ಲಪ್ಪ ಕುಂಬಾರ(34) ಎಂದು ಗುರುತಿಸಲಾಗಿದೆ. ಭಾನುವಾರವಾದ ಕಾರಣ ಮೀನು ಹಿಡಿಯಲು ಗುತ್ತಲ ಪಟ್ಟಣದಿಂದ ಚೌಡಯ್ಯದಾನಪುರ ಗ್ರಾಮಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ನದಿಗೆ ಇಳಿದಾಗ ಈಜು ಬಾರದೆ ಮುಳಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆಯಲ್ಲಿ ತಂಬಾಕು ಸೇವಿಸುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷ

haveri tungabhadra river choudayyadanap 2ur 2

ಮಾಹಿತಿ ತಿಳಿಯುತ್ತಿದ್ದಂತೆ ರಾಣೇಬೆನ್ನೂರು ಗ್ರಾಮಾಂತರ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕರ ಶೋಧಕಾರ್ಯ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *