ಚಿತ್ರದುರ್ಗ: ಕೊರೊನಾ ಹರಡದಂತೆ ಭಾರತ ಲಾಕ್‍ಡೌನ್ ಆಗಿ ಇಂದಿಗೆ ಎರಡು ದಿನವಾಗಿದೆ. ಹೀಗಾಗಿ ಪ್ರವಾಸಿತಾಣ ಚಿತ್ರದುರ್ಗದಲ್ಲಿ ನೆಲೆಸಿರುವ ಭಿಕ್ಷಕರು, ನಿರ್ಗತಿಕರು ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳು ಚಿತ್ರದುರ್ಗ ನಗರದಲ್ಲಿ ಆಹಾರ ಸಿಗಲಾರದೇ ಕಂಗಾಲಾಗಿದ್ದರು. ಇದೀಗ ಸ್ವಯಂ ಸೇವರು ಇವರಿಗೆ ಉಚಿತ ಆಹಾರ, ನೀರು ವಿತರಿಸುತ್ತಿದ್ದಾರೆ.
ಆಹಾರ ನೀರು ತರಲು ಹೋಟೆಲ್‍ಗಳಿಲ್ಲದೇ ಜನರು ಪರದಾಡುತ್ತಿದ್ದರು. ಹೀಗಾಗಿ ಬುಧವಾರ ಅವರ ಸ್ಥಿತಿ ಕಂಡ ಗರುಡಕೇಸರಿ ಎಂಬ ಸ್ವಯಂ ಸೇವಕ ಯುವಕರ ಬಳಗವು ರಾತ್ರಿಯಿಂದಲೇ ಆಹಾರವನ್ನು ಪ್ಯಾಕ್ ಮಾಡಿಕೊಂಡು ಬಿಸ್ಲೇರಿ ನೀರು ಸಹಿತ ಆಟೋದಲ್ಲಿ ಸೇವೆ ನೀಡುತ್ತಿದ್ದಾರೆ.
Advertisement
ಹಸಿದವರಿಗೆ ಉಚಿತ ಅನ್ನ, ನೀರು ನೀಡುವ ಮೂಲಕ ಯುವಕರು ಮಾನವೀಯತೆ ಮೆರೆಯುತ್ತಿದ್ದಾರೆ. ಇವರ ಕಾರ್ಯಕ್ಕೆ ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಹಾರ ಹಾಗೂ ನೀರಿನ ಬಾಟಲಿಗಳನ್ನು ಆಟೋದಲ್ಲಿ ಹಾಕಿಕೊಂಡು ಯುವಕರು ನಗರದಾದ್ಯಂತ ವಿತರಣೆ ಮಾಡುತ್ತಿದ್ದಾರೆ.
Advertisement
ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಸ್ಲಂಗಳಲ್ಲಿ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.