Bengaluru City
ಮಹಿಳೆಗೆ ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿದ ಯುವಕರು

ಬೆಂಗಳೂರು: ವೃದ್ಧಾಶ್ರಮದಲ್ಲಿ ಆಯಾ ಆಗಿ ಕೆಲಸ ಮಾಡೋ ಮಹಿಳೆಗೆ ಕೆಲ ಯುವಕರು ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ನಡೆದಿದೆ.
ಇಲ್ಲಿನ ಎಐಎ ವೃದ್ಧಾಶ್ರಮ ಮತ್ತು ಪಿಜಿಯಲ್ಲಿ ಕೆಲಸಕ್ಕಿದ್ದ ಮಂಜುಳಾ ಎಂಬವರ ವಿರುದ್ಧ ಮೊಬೈಲ್ ಕಳ್ಳತನದ ಆರೋಪ ಹೊರೆಸಿದ ಪಿಜಿ ಯುವಕರು ಅವರಿಗೆ ಹೊಡೆದು ಸಿಗರೇಟ್‍ನಿಂದ ಸುಟ್ಟಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಮಂಜುಳಾ ಗಾಯಗೊಂಡಿರುವುದು ಗೊತ್ತಾಗಿದೆ.
ಕೂಡಲೇ ಮಂಜುಳಾರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿರೋ ಯುವಕರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
