ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ, ಆಹ್ಲಾದಕರ ವಾತಾವರಣ, ಹಸಿರು ಸಿರಿಯ ನಡುವೆ ಅರುಣೋದಯ, ಸೂರ್ಯಾಸ್ತಮದ ದೃಶ್ಯ ಕಣ್ತುಂಬಿಕೊಳ್ಳೋದೇ ಒಂದು ಸೊಗಸು. ಆದರೆ ಈ ಅದ್ಭುತದ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂದು ಎಲ್ಲರ ಆಸೆ. ಆ ಒಂದು ಫೋಟೋಗಾಗಿ ಪ್ರವಾಸಿಗರು ಪ್ರಾಣವನ್ನೇ ಪಣಕ್ಕಿಟ್ಟು ಹುಚ್ಚು ಸಾಹಸ ಮಾಡುತ್ತಿದ್ದಾರೆ.
ಒಂದೆಡೆ ಮಂಟಪ ಹತ್ತುವುದಕ್ಕೆ ಸರ್ಕಸ್, ಮತ್ತೊಂದೆಡೆ ಹತ್ತೋದು ಹತ್ತಿದ್ದಾಯ್ತು ಇಳಿಯೋದು ಹೆಂಗೆ ಎಂದು ಯುವಕ-ಯುವತಿಯರು ಚಿಂತೆ ಪಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಸೆಲ್ಫಿಗಾಗಿ ಇಲ್ಲಿಗೆ ಬರೋ ಸಾವಿರಾರು ಪ್ರವಾಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸರ್ಕಸ್ ಮಾಡುತ್ತಿದ್ದಾರೆ. ಮನಮೋಹಕ ದೃಶ್ಯದ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
Advertisement
Advertisement
ಈಗಾಗಲೇ ಈ ಮಂಟಪಗಳು ಶಿಥಿಲಾವಸ್ಥೆಗೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯಬಹುದು. ಇದರ ಮೇಲೆ ಹತ್ತುವುದು ಅಪಾಯ ಅಂತ ಬೋರ್ಡ್ ಹಾಕಿದರೂ ಅದನ್ನೇ ಅಡಿಪಾಯ ಮಾಡಿಕೊಂಡು ಪ್ರವಾಸಿಗರು ಮಂಟಪ ಏರುತ್ತಿದ್ದಾರೆ. ಇವರಿಗೆ ತಮ್ಮ ಜೀವದ ಬಗ್ಗೆ ಭಯವೇ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Advertisement
ಒಂದು ದಿನದ ಎಂಜಾಯ್ ಮೆಂಟ್‍ಗೆ ಅಂತ ಸಾವಿರಾರು ಪ್ರವಾಸಿಗರು ನಂದಿ ಹಿಲ್ಸ್ ಗೆ ಬರುತ್ತಾರೆ. ಆದರೆ ಮೋಜಿನ ನಡುವೆ ಯಾರಾದರೂ ಬಿದ್ದು ಕೈ, ಕಾಲು ಕಳೆದುಕೊಂಡರೆ, ಪ್ರಾಣ ಹಾನಿಯಾದರೆ ಯಾರು ಹೊಣೆ. ಇನ್ನಾದರೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಭದ್ರತೆ ಒದಗಿಸಬೇಕಿದೆ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv