ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದ್ದು ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ವಾಹನ ಸವಾರರ ಮೇಲೆ ಇಬ್ಬರು ಪಟಾಕಿ (Firecrackers) ಸಿಡಿಸಿದ್ದಾರೆ. ಬೆಂಗಳೂರಿನ (Bengaluru) ಹೆಚ್‌ಬಿಆರ್ ಲೇ ಔಟ್‌ನಲ್ಲಿ ಘಟನೆ ಇಬ್ಬರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯಲ್ಲಿ ಪಟಾಕಿ ಹಚ್ಚಿದ್ದಾರೆ. ಇದನ್ನೂ ಓದಿ: ಪಟಾಕಿ ಸಿಡಿತದಿಂದ ಜನರ ಕಣ್ಣಿಗೆ ಕುತ್ತು – ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿಗೆ ಚಿಕಿತ್ಸೆ
ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಪಟಾಕಿಯನ್ನು ರಸ್ತೆಗೆ ಎಸೆಯುತ್ತಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂದಿಸಿದ್ದಾರೆ.