ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕರು ಹಾಗೂ ವಕೀಲರ (Lawyer) ನಡುವೆ ಗಲಾಟೆ ನಡೆದಿರುವ ಘಟನೆ ಹಾಸನ (Hassan) ನಗರದಲ್ಲಿ ನಡೆದಿದೆ.
ವಕೀಲ ನರಸಿಂಹಮೂರ್ತಿ ಅವರು ಕಾರಿನಲ್ಲಿ ಕಳೆದ ರಾತ್ರಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬಿ.ಎಂ.ರಸ್ತೆಯಲ್ಲಿ ಅಬ್ದುಲ್ ಶಫಿನ್ ಹಾಗೂ ಆತನ ಸ್ನೇಹಿತರು ವಕೀಲರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಇದೇ ವಿಚಾರಕ್ಕೆ ನರಸಿಂಹಮೂರ್ತಿ ಹಾಗೂ ಅಬ್ದುಲ್ ಶಫಿನ್ ನಡುವೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ವಕೀಲ ನರಸಿಂಹಮೂರ್ತಿ ಮೇಲೆ ಅಬ್ದುಲ್ ಶಫಿನ್ ಹಾಗೂ ಸ್ನೇಹಿತನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
Advertisement
Advertisement
ನಂತರ ವಕೀಲ ನರಸಿಂಹಮೂರ್ತಿ ಚಿಕಿತ್ಸೆಗೆ ಆಸ್ಪತ್ರೆಗೆ (Hospital) ದಾಖಲಾಗಿದ್ದು, ವಿಷಯ ತಿಳಿದ ಅಬ್ದುಲ್ ಹಾಗೂ ಸ್ನೇಹಿತರು ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ವಕೀಲರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಬಂದ ವಕೀಲ ಪೂರ್ಣಚಂದ್ರ ಮೇಲೂ ಅಬ್ದುಲ್ ಶಫೀನ್ ಹಾಗೂ ಮೂವರು ಸ್ನೇಹಿತರಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 2ನೇ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಾಣಕ್ಕೆ ತಯಾರಿ ಶುರು – ಮೈಲಿಗಲ್ಲಿನತ್ತ ಭಾರತ
Advertisement
Advertisement
ಘಟನೆ ಖಂಡಿಸಿ ವಕೀಲರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ನರಸಿಂಹಮೂರ್ತಿ ಹಾಗೂ ಪೂರ್ಣಚಂದ್ರ ಪೊಲೀಸರಿಗೆ ದೂರು ನೀಡಿದ್ದು, ಬಡಾವಣೆ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಶಫೀನ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ